ತಮಿಳುನಾಡು ಚುನಾವಣೆ ಹಿನ್ನೆಲೆ : ಗೃಹ ರಕ್ಷಕದಳದ ಸಿಬ್ಬಂದಿಗಳು ಚುನಾವಣಾ ಕರ್ತವ್ಯಕ್ಕೆ

0

ಉಪ್ಪಿನಂಗಡಿ: ತಮಿಳುನಾಡು ರಾಜ್ಯದಲ್ಲಿ ಎ.23ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಘಟಕದ ಗೃಹರಕ್ಷಕ ದಳದ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕಾಗಿ ತಮಿಳುನಾಡಿಗೆ ತೆರಳಿದ್ದಾರೆ.


ಗೃಹ ರಕ್ಷಕದಳದ ಸೆಕ್ಷನ್ ಲೀಡರ್ ದಿನೇಶ್ ಬೊಳ್ಳಾರ್, ಜನಾರ್ದನ ಆಚಾರ್ಯ, ಸೋಮನಾಥ, ವಸಂತ, ಗೋಪಾಲಕೃಷ್ಣ, ದೇವರಾಜ್, ಶಿಬುಜಾನ್, ಆರೀಸ್, ಸಮದ್, ಜುನೈದ್, ನವಾಜ್ ಅವರು ಚುನಾವಣಾ ಆಯೋಗದ ವಿಶೇಷ ಬಸ್‌ನಲ್ಲಿ ತಮಿಳುನಾಡಿಗೆ ತೆರಳಿದ್ದು, ಎ.25ರಂದು ವಾಪಸ್ ಆಗಲಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ದ.ಕ. ಜಿಲ್ಲೆಯ 120 ಮಂದಿ ಸೇರಿದಂತೆ ಕರ್ನಾಟಕ ರಾಜ್ಯದಿಂದ ಒಟ್ಟು 8 ಸಾವಿರ ಗೃಹ ರಕ್ಷಕ ದಳದ ಸಿಬ್ಬಂದಿ ತಮಿಳುನಾಡಿಗೆ ಚುನಾವಣಾ ಕರ್ತವ್ಯಕ್ಕೆಂದು ತೆರಳಿದ್ದಾರೆ.

LEAVE A REPLY

Please enter your comment!
Please enter your name here