ಉಪ್ಪಿನಂಗಡಿ: ಜೇಸಿಐ ಪ್ರಶಸ್ತಿಗೆ ದುರ್ಗಾಪ್ರಸಾದ್ ಬಿ. ಆಯ್ಕೆ

0

ಉಪ್ಪಿನಂಗಡಿ: ಜೇಸಿಐ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ವಿಶೇಷ ಪುರಸ್ಕಾರಕ್ಕೆ ಪೆರಿಯಡ್ಕ ಬೊಳ್ಳಾವು ನಿವಾಸಿ ದುರ್ಗಾಪ್ರಸಾದ್ ಬಿ. ಆಯ್ಕೆಯಾಗಿದ್ದಾರೆ.
ವಿಕಲಚೇತನರಾಗಿದ್ದರೂ ತನ್ನನ್ನು ಕೃಷಿಯಲ್ಲಿ ತೊಡಗಿಸಿಕೊಂಡು ಪ್ರಗತಿಪರ ಯುವ ಕೃಷಿಕನಾಗಿರುವ ಇವರು, ರಾಮ ಭಟ್ ಬೊಳ್ಳಾವು ಮತ್ತು ವಿಜಯಲಕ್ಷ್ಮೀ ದಂಪತಿಯ ಪುತ್ರ. ಎ.೨೦ರಂದು ಬೇರಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಜೇಸಿಐ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here