ಸಾಹಿತಿ, ಸಂಶೋಧಕ ಅನಂತರಾಜ ಗೌಡ ಪುತ್ತೂರು ನಿಧನ

0

ಪುತ್ತೂರು : ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಗೌರವ ಸಲಹೆಗಾರರಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಮೂಲತಃ ಪುತ್ತೂರಿನವರಾಗಿದ್ದು, ಸಾಹಿತಿ ಸಂಶೋಧಕ ಅನಂತರಾಜ ಗೌಡ ಪುತ್ತೂರು(81.ವ) ಅವರು ಏ.20ರಂದು ನಿಧನರಾಗಿದ್ದಾರೆ.

ಅನಂತರಾಜ ಗೌಡ ಪುತ್ತೂರು
ಪುತ್ತೂರಿನ ತೆಂಕಿಲಬೈಲು ದಿ.ದೊಡ್ಡಯ್ಯ ಗೌಡ ಮತ್ತು ಸೀತಮ್ಮ ಅವರ ಏಕಮಾತ್ರ ಪುತ್ರ ಅನಂತರಾಜ ಗೌಡ ಅವರು ಪಾಂಗ್ಲಾಯಿಯಲ್ಲಿ ಹುಟ್ಟಿ ಬೆಳೆದು ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನಲ್ಲೇ ಮಾಡಿದ್ದು,1962ರ ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ (ಈಗಿನ ಸ.ಪ.ಪೂ ಪದವಿ ಪೂರ್ವ ಕಾಲೇಜು)ನ ಹಿರಿಯ ವಿದ್ಯಾರ್ಥಿ.ಆ ಬಳಿಕ ಮಂಗಳೂರಿನಲ್ಲಿ ಡಿಪ್ಲೊಮಾ ಮಾಡಿದ್ದ ಅವರು ಪ್ರಸ್ತುತ ಬೆಂಗಳೂರುನಲ್ಲಿ ಬಿ.ಟಿ.ಎಂ.ಲೇಔಟ್‌ನಲ್ಲಿ ವಾಸ್ತವ್ಯ ಹೊಂದಿದ್ದರು.


ಅನಂತರಾಜ ವೃತ್ತಿಯಲ್ಲಿ ಗೌಡರು ಬಿ.ಯಚ್.ಇ.ಎಲ್ (ಹೈದರಾಬಾದ್) ಮತ್ತು ಮೈಕೊ-ಬಾಷ್ ಬಹುರಾಷ್ಟ್ರೀಯ ಸಂಸ್ಥೆಯ ಸೀನಿಯ‌ರ್ ಮೆನೇಜರ್ ಆಗಿ ಉದ್ಯಮಿಯಾಗಿದ್ದರು.ಕೊಡಗಿನಲ್ಲಿ ಕಾಫಿ ಬೆಳೆಗಾರರಾಗಿರುವ ನಿವೃತ್ತಿ ಪಡೆದು ಈಗ ಬೆಂಗಳೂರಿನಲ್ಲಿ ದಕ್ಷಿಣ ಕನ್ನಡ, ಕೊಡಗು, ಮಲ್ನಾಡು ಇವರು ಮತ್ತು ಬಯಲು ಸೀಮೆಯ ಗೌಡ-ಒಕ್ಕಲಿಗ ಸಮುದಾಯದ ಸಂಸ್ಕೃತಿ, ಪರಂಪರೆ, ಭಾಷೆಗಳ ಅಧ್ಯಯನ ಸ್ಕೂಲ ಮಟ್ಟದಲ್ಲಿ ನಡೆಸಿದ್ದು,ಸುದೀರ್ಘ ಕ್ಷೇತ್ರ ಶೋಧನೆ ನಡೆಸಿದ್ದರು.ಈ ಕುರಿತ ಅವರ ಎರಡು ಕೃತಿಗಳು “IN PURSUIT OF OUR ROOTS ಒಕ್ಕಲಿಗ ಸಂಘದಲ್ಲಿ ಬಿಡುಗಡೆಗೊಂಡಿತ್ತು.ಕನ್ನಡದಲ್ಲಿ “ರಾಜ ಪರಂಪರೆಯ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡರು” ಕೃತಿ ಬೆಂಗಳೂರಿನ ಸಾಹಿತ್ಯ ಪರಿಷತ್ತಿನಲ್ಲಿ ಆದಿಚುಂಚನಗಿ ರಿಯ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಬಿಡುಗಡೆಗೊಳಿಸಿದ್ದರು.2023 ಜೂನ್‌ನಲ್ಲಿ ವೀರ ಲೋಕ ಪ್ರಕಾಶನ ಅವರಿಂದ ಬಿಡುಗಡೆಯಾದ ಇವರ ಚಾರಿತ್ರಿಕ ಸಂಶೋಧನಾ ಕೃತಿ-10 ಕುಟುಂಬ 18 ಗೋತ್ರದ “ಗೌಡ ಪರಂಪರೆ” 2024ರಲ್ಲಿ ಮರು ಮುದ್ರಣ ಕಂಡಿದೆ. ದಕ್ಷಿಣ ಕನ್ನಡ ಮತ್ತು ಕೊಡಗಿನ ಗೌಡ ಸಮುದಾಯವನ್ನು ಮಲ್ನಾಡು ಹಾಗೂ ಬಯಲು ಸೀಮೆಯ ಗೌಡ-ಒಕ್ಕಲಿಗ ಸಮುದಾಯದೊಂದಿಗೆ ಸಮೀಕರಿಸುವ ಇವರ ಪ್ರಯತ್ನ ಇಂದಿಗೆ ಕೈಗೂಡಿದೆ ಎಂದರೆ ಅತಿಶಯೋಕ್ತಿ ಆಗಲಾರದು. ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಬಹು ಸಂಖ್ಯಾತರು ಮತ್ತು ಪ್ರಭಾವಿ ಸಮುದಾಯದ ಕೊಂಡಿಯನ್ನು ಕರ್ನಾಟಕದ ರಾಜವಂಶಗಳಾದ ಹಾಲೇರಿ, ಕೆಳದಿ, ಚಂಗಾಳ್ವರು, ಚಾಲುಕ್ಯರ, ಹೊಯ್ಸಳರ ಹಾಗೂ ತಲಕಾಡಿನ ಗಂಗರೊಂದಿಗೆ ಶಾಸನ ಮತ್ತಿತರ ಆಧಾರಪೂರ್ವಕವಾಗಿ ಸಾಬೀತು ಪಡಿಸಿರುತ್ತಾರೆ. 1837ರ ಅಮರಸುಳ್ಯ ಸ್ವಾತಂತ್ರ್ಯ ಸಮರದ ನಂತರ ಬ್ರಿಟಿಷರು ಹಾಗೂ ಅವರ ಅನುಯಾಯಿಗಳ ಕುಮ್ಮಕ್ಕಿನಿಂದ ಸರ್ವಸ್ವವನ್ನೂ ಕಳೆದುಕೊಂಡು ನೂರು ವರ್ಷಗಳ ಕಾಲ ಅವಹೇಳನಕ್ಕೆ ಈಡಾಗಿ, ಕೀಳರಿಮೆಯಿದ್ದ ಯುವ ಜನಾಂಗಕ್ಕೆ ತಮ್ಮವರ ಪೂರ್ವಕಾಲದ ಹಿರಿಮೆಯನ್ನು ತೋರಿಸಿಕೊಟ್ಟು ಆತ್ಮ ನಿರ್ಭರತೆಯನ್ನು ಉಂಟುಮಾಡಲು ಶ್ರಮಿಸಿರುತ್ತಾರೆ.


ಕೊಡಗಿನಲ್ಲಿ ಅಳಿವಿನಂಚಿನಲ್ಲಿದ್ದ ಕೆಲವು ವಿದ್ಯಾ ಸಂಸ್ಥೆಗಳನ್ನು ಆದಿಚುಂಚನಗಿರಿ ಸಂಸ್ಥಾನ ಅಧೀನಕ್ಕೆ ತರುವಲ್ಲಿ ಎಲೆಮರೆಯ ಕಾಯಿ ತರ ಶ್ರಮಿಸಿದ ಅನಂತರಾಜ ಗೌಡರ ನೇತೃತ್ವದಲ್ಲಿ 2016ರಲ್ಲಿ ತಲಕಾವೇರಿ ತೀರ್ಥೋದ್ಭವದ ಅಂಗವಾಗಿ 1000ಕ್ಕೂ ಹೆಚ್ಚು ಕೊಡಗು ಮತ್ತು ಬಯಲು ಸೀಮೆಯ ಗೌಡ-ಒಕ್ಕಲಿಗರು ತಮ್ಮ ಪಾರಂಪರಿಕ ಪೋಷಾಕಿನೊಂದಿಗೆ ಭಾಗಮಂಡಲದಿಂದ ತಲಕಾವೇರಿಗೆ ಭಂಡಾರ ಹೋಗುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅವಿಸ್ಮರಣೀಯ. 2017ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಸರಕಾರದಿಂದ ನಡೆದ ಕೆಂಪೇಗೌಡರ ಜಯಂತ್ಯುತ್ಸವ ಸಮಾರಂಭದಲ್ಲಿ 1000ಕ್ಕೂ ಮಿಕ್ಕಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡರು ಸಾಂಪ್ರದಾಯಿಕ ಉಡುಗೆಯಲ್ಲಿ ಕೊಡಗಿನ ಸುಗ್ಗಿ ಕುಣಿತ, ಕೋಲಾಟ ಇತ್ಯಾದಿಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಸರ್ಕಾರ, ಮಾಧ್ಯಮ ಮತ್ತು ರಾಜ್ಯವ್ಯಾಪಿ ಜನರ ಗಮನ ಸೆಳೆದು ಪ್ರಶಂಸೆಗೆ ಪಾತ್ರರಾದರು.ಈ ಕಾರ್ಯಕ್ರಮದ ಆಯೋಜನೆಯಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು.ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ () एដូវ, INDIAN INSTITUTE OF PRODUCTION EN-GINEERS ನ ಕಾರ್ಯದರ್ಶಿಯಾಗಿ, ಮೈಕೊ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ ಒಪರೇಟಿವ್ ಸೊಸೈಟಿಯ ನಿರ್ದೇಶಕರಾಗಿದ್ದರು.ನವಂಬರ 2019ರಂದು ತಲಕಾಡು ಚಿಕ್ಕರಂಗೇಗೌಡರ ಅಧ್ಯಕ್ಷತೆಯ “ಭಾರತ ಜ್ಞಾನಾಭಿವೃದ್ಧಿ ಟ್ರಸ್ಟಿನ” ಗೌರವ ಸದಸ್ಯರಾಗಿ, ತಂಡದಿಂದ “1837ರ ಅಮರಸುಳ್ಯ ಸ್ವಾತಂತ್ರ್ಯ’ದ ಕುರಿತು ಕ್ಷೇತ್ರ ಶೋಧನೆಯಿಂದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ “ಅಮರಸುಳ್ಯ ಸ್ವಾತಂತ್ರ ಸಮರ-1837” ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕಾರ್ಯಕ್ರಮ ನಡೆಸಿದ್ದರು. ಅಮರಸುಳ್ಯ ಸ್ವಾತಂತ್ರ್ಯ ಸಮರದಲ್ಲಿ ಹುತಾತ್ಮರಾದ ಮಹಾ ದಂಡನಾಯಕ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ 2022ರಲ್ಲಿ ಲೋಕಾರ್ಪಣೆಗೊಳ್ಳುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು “ಸಾಧಕರಿಗೆ ಸನ್ಮಾನ” ಸ್ವೀಕರಿಸಿದ್ದರು.ರಾಷ್ಟ್ರೀಯ ಸನ್ಮಾನ ಪಡೆದ 10 ಕುಟುಂಬ 18 ಗೋತ್ರದ ಗೌಡರಲ್ಲಿ ಇವರು ಪ್ರಥಮರು. ಮೃತರು ಪತ್ನಿ ಪಿ.ಎ ವೇದಾವತಿ, ಮಗ ಹಿತೇಶ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here