






ಪುತ್ತೂರು: ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಯ ಮಹತ್ತರ ಉದ್ದೇಶವನ್ನಿಟ್ಟುಕೊಂಡುಕಾರ್ಯನಿರ್ವಹಿಸುತ್ತಿರುವ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ, ಗುಣಮಟ್ಟದ ಶಿಕ್ಷಣದ ಪ್ರಸರಣಕ್ಕಾಗಿಸುಮಾರು 80ಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳನ್ನು ತೆರೆದಿದೆ.ಶಿಕ್ಷಣಕ್ಕೊಂದು ಹೊಸ ಭಾಷ್ಯವನ್ನು ನೀಡುವ ಹಿನ್ನೆಲೆಯಲ್ಲಿ ಈ ಎಲ್ಲಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘ ರೂಪಿಸಿದ ಅಂತಹ ಉತ್ಕೃಷ್ಟ ತಾಣಗಳಲ್ಲಿ ಪುತ್ತೂರಿನ ತೆಂಕಿಲದಲ್ಲಿರುವ ನರೇಂದ್ರ ಪ.ಪೂ.ಕಾಲೇಜು ಕೂಡ ಒಂದು.



ಸ್ಥಳೀಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಪದವಿ ಪೂರ್ವ ಶಿಕ್ಷಣವನ್ನು ನೀಡುವ ಸದುದ್ದೇಶದಿಂದ 2017ರಲ್ಲಿ ತೆಂಕಿಲದ ವಿವೇಕನಗರದಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ,ಎಪ್ರಿಲ್ 6ರ 2019ರಂದು ಲೋಕಾರ್ಪಣೆಗೊಂಡು, ಎಲ್ಲಾಆಧುನಿಕ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ನೂತನಕಟ್ಟಡದಲ್ಲಿ ಶೈಕ್ಷಣಿಕ ತರಗತಿಗಳನ್ನು ನಡೆಸುತ್ತಿದೆ.ಪ್ರಶಾಂತ ಮತ್ತು ಕಲಿಕೆಗೆ ಪೂರಕ ವಾತಾವರಣದಲ್ಲಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುವಅನುಭವಿ ಶಿಕ್ಷಕರ ತಂಡ ಮಾತ್ರವಲ್ಲದೇ ಸುಸಜ್ಜಿತಗ್ರಂಥಾಲಯ ಮತ್ತುಎಲ್ಲಾ ಉಪಕರಣಗಳನ್ನೊಳಗೊಂಡ ಪ್ರಯೋಗಾಲಯವನ್ನು ಹೊಂದಿದೆ.ಸಮರ್ಥ ಆಡಳಿತ ಮಂಡಳಿ ಎಲ್ಲಾ ಶೈಕ್ಷಣಿಕ ಕರ್ಯಕ್ರiಗಳಿಗೆ ಅತ್ಯುತ್ತಮ ಮಾರ್ಗದರ್ಶನವನ್ನು ನೀಡುತ್ತಿದೆ.



ಶಿಕ್ಷಣದ ಮೂಲಕ ವಿದ್ಯಾರ್ಥಿಯ ಬೌಧ್ಧಿಕ,ಸಾಮಾಜಿಕ,ಭೌತಿಕ,ಆರ್ಥಿಕ,ಧಾರ್ಮಿಕ,ಸಾಂಸ್ಕೃತಿಕ,ನೈತಿಕ,ಆಧ್ಯಾತ್ಮಿಕ ಮೌಲ್ಯಗಳಿಂದ ಪ್ರಬಲವಾಗಿರುವ ಬುದ್ಧಿಶಕ್ತಿಯನ್ನು ಉತ್ತೇಜಿಸಿ ಸದೃಢರನ್ನಾಗಿ ಬೆಳೆಸುವ ಉದ್ದೇಶವನ್ನು ಹೊಂದಿದೆ.
ವಿವಿಧ ಸಾಮಾಜಿಕ ಸ್ತರದಿಂದ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಸಂಸ್ಕಾರ ನೀಡಿ,ಮಾನವೀಯ ಮೌಲ್ಯಗಳನ್ನು ಧಾರೆಎರೆದು ಸಾಂಘಿಕ ಬದುಕಿನಅರಿವು ಮೂಡಿಸಿ ಪ್ರಜ್ಞಾವಂತ ನಾಗರಿಕರನ್ನಾಗಿರೂಪಿಸುವ ಮಹತ್ವದ ಹೊಣೆಗಾರಿಕೆಯನ್ನು ಹೊತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯಆಂತರ್ಯದಲ್ಲಿ ಹುದುಗಿರುವ ಅನೇಕ ತೆರನಾದ ಪ್ರತಿಭೆಗಳಿಗೆ ವಿವಿಧರೂಪದಲ್ಲಿಅವಕಾಶವನ್ನು ನೀಡಲಾಗಿದೆ.
ವಿಜ್ಞಾನ ವಿಭಾಗದಲ್ಲಿ
ಪಿಸಿಎಂಬಿ/PCMB (ಭೌತಶಾಸ್ತ್ರ,ರಸಾಯನಶಾಸ್ತ್ರ,ಗಣಿತ,ಜೀವಶಾಸ್ತ್ರ)
ಪಿಸಿಎಂಸಿ/PCMC (ಭೌತಶಾಸ್ತ್ರ,ರಸಾಯನಶಾಸ್ತ್ರ,ಗಣಿತ,ಗಣಕವಿಜ್ಞಾನ)
ವಾಣಿಜ್ಯ ವಿಭಾಗದಲ್ಲಿ
ಎಸ್ಇಬಿಎ/SEBA (ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರ,ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ,)
ಬಿಇಬಿಎ/ BEBA (ಮೂಲಗಣಿತ, ಅರ್ಥಶಾಸ್ತ್ರ,ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ,)
ಎಂಬ ಸಂಯೋಜನೆಗಳನ್ನು ಹೊಂದಿದೆ. ಇಂಗ್ಲಿಷ್ ಭಾಷೆಜೊತೆಗೆ ಇನ್ನುಳಿದಂತೆ ಕನ್ನಡ, ಹಿಂದಿ, ಸಂಸ್ಕೃತ ಭಾಷೆಯನ್ನು ಆರಿಸಿಕೊಳ್ಳಬಹುದಾಗಿದೆ.
ಅತ್ಯುತ್ತಮ ಫಲಿತಾಂಶ: 2025-26 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಶೇ.97 ಫಲಿತಾಂಶವನ್ನು ಪಡೆದಿದೆ.39 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆ ಹೊಂದಿರುತ್ತಾರೆ. ದ್ವಿತೀಯವಾಣಿಜ್ಯ ವಿಭಾಗದ ಹರ್ಷಿತಾ ಕೆ. 593ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 7ನೇ ಸ್ಥಾನವನ್ನು ಮತ್ತು ದ್ವಿತೀಯ ವಿಜ್ಞಾನ ವಿಭಾಗದ ನಂದನ 590 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 9ನೇ ಸ್ಥಾನವನ್ನು ಪಡೆದಿರುತ್ತಾರೆ. ಈ ಅತ್ಯುತ್ತಮ ಫಲಿತಾಂಶವು ಕಾಲೇಜಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.
ಕೋಚಿಂಗ್ ಮತ್ತು ಶುಲ್ಕ ವಿನಾಯಿತಿ: ವಾರಾಂತ್ಯದಲ್ಲಿ ಜೆಇಇ , ನೀಟ್, ಸಿಇಟಿ,ಸಿಪಿಟಿ ತರಗತಿಗಳನ್ನು ನೀಡುವ ಮುಖಾಂತರರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳನ್ನು ಮತ್ತು ಸ್ಪರ್ಧಾತ್ಮಕಜಗತ್ತಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುತ್ತಿದೆ. ಜೊತೆಗೆ ಎಸೆಸೆಲ್ಸಿಯಲ್ಲಿ ಶೇ.98ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ.
ವ್ಯವಹಾರ – ರಿಟೈಲ್ ಬ್ಯುಸಿನೆಸ್ ತರಬೇತಿಕರ್ಯಕ್ರಮ:
ವ್ಯವಹಾರ ಎಂಬ ರಿಟೈಲ್ ಬ್ಯುಸಿನೆಸ್ ತರಬೇತಿಕರ್ಯಕ್ರಮದ ಮೂಲಕ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಕೌಶಲ್ಯ ಮತ್ತುಜ್ಞಾನವನ್ನು ಸುಧಾರಿಸಲು ಅವಕಾಶಗಳನ್ನು ನೀಡಲಾಗುತ್ತಿದೆ. ಈತರಬೇತಿಯಲ್ಲಿ ವಿವಿಧ ತಜ್ಞರಿಂದ ವಿಶೇಷ ಉಪನ್ಯಾಸಗಳು,ಸ್ಟೈಪೆಂಡ್ ಜೊತೆಗೆ ಇಂಟರ್ನ್ಶಿಪ್ , ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವ ಅವಕಾಶ, ಸೇಲ್ಸ್, ಅಕೌಂಟಿಂಗ್, ಮಾರ್ಕೆಟಿಂಗ್ ಮುಂತಾದ ವ್ಯಾಪಾರ ಆವರಣಗಳ ಭೇಟಿ, ಸಾಫ್ಟ್ ಸ್ಕಿಲ್ ತರಬೇತಿ ಮತ್ತು ಇನ್ನಿತರ ಕೌಶಲ್ಯಾಧಾರಿತ ತರಬೇತಿಗಳ ಮೂಲಕ ವಾಣಿಜ್ಯ ಕ್ಷೇತ್ರದ ಉದ್ಯಮ ಜ್ಞಾನವನ್ನು ನೀಡಲಾಗುತ್ತಿದೆ.
ಸಂಸ್ಕಾರಯುತ ಶಿಕ್ಷಣ ಮತ್ತು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕ ವ್ಯವಸ್ಥೆ:
ವಿದ್ಯಾರ್ಥಿಗಳಿಗಾಗಿ ಸೂರ್ಯನಮಸ್ಕಾರ,ಧ್ಯಾನ,ಪ್ರಾಣಾಯಾಮ,ಭವದ್ಗೀತಾ ಪಠಣ,ವಿಷ್ಣು ಸಹಸ್ರನಾಮ ಪಠಣ, ಸಾಫ್ಟ್ ಸ್ಕಿಲ್ ,ಸ್ಪೋಕನ್ಇಂಗ್ಲಿಷ್ ತರಗತಿಗಳನ್ನು ನಡೆಸುವುದರಜೊತೆಗೆ ವಿದ್ಯಾರ್ಥಿಸಮುದಾಯದಲ್ಲಿಓರಣದ ನಡೆತೆ,ಸುಹವ್ಯಾಸ,ಸದಭಿರುಚಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡಲಾಗುತ್ತಿದೆ.
ಯೋಗ ,ಧ್ಯಾನತರಗತಿಯು ವಿದ್ಯಾರ್ಥಿಯ ನೆನಪಿನ ಶಕ್ತಿ ಹಾಗೂ ಓದಿನಲ್ಲಿಏಕಾಗ್ರತೆಯನ್ನು ಹೆಚ್ಚಿಸುವಂತೆ ಮಾಡಲು ಸಹಕಾರಿಯಾಗಿದೆ.ವಿದ್ಯಾರ್ಥಿಗಳಿಗೆಕರಾಟೆ ಮತ್ತು ಮಾರ್ಷಲ್ಆರ್ಟ್ತರಬೇತಿಯನ್ನು ನೀಡಲಾಗುತ್ತಿದೆ.ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆ,ಮಧ್ಯಾಹ್ನದಊಟದ ವ್ಯವಸ್ಥೆಯನ್ನುಕಾಲೇಜಿನಲ್ಲಿ ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಸದೃಢ ಭವಿಷ್ಯದ ನಿರ್ಮಾಣಕ್ಕಾಗಿ Digital Class
ಪ್ರಥಮ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿಯಾದ ಐಟಿ (Information Technology) ಕೋರ್ಸ್ಗಳನ್ನು ನಡೆಸುತ್ತಿದ್ದು, ಉನ್ನತ ಶಿಕ್ಷಣಕ್ಕೆ ಅಗತ್ಯವಾದ ವಿಚಾರಗಳ, ಪರಿಕಲ್ಪನೆಗಳ ಬಗ್ಗೆ ಅರಿವು ಮೂಡಿಸಲಿರುವಒಂದು ವೇದಿಕೆಯಾಗಿದೆ. ಈ ತರಗತಿಗಳಲ್ಲಿಸ್ಪರ್ಧಾತ್ಮಕ ಜಗತ್ತಿಗೆತೆರೆದುಕೊಂಡಿರುವ ಶಿಕ್ಷಣ ವ್ಯವಸ್ಥೆಗೆಅಗತ್ಯವಾದ ತಂತ್ರಜ್ಞಾನಗಳ ಬಗ್ಗೆ,ಜೊತೆಗೆಕಂಪ್ಯೂಟರ್ ಬೇಸಿಕ್ ಕೋರ್ಸ್ಗೆ ಪೂರಕವಾದವಿಚಾರಗಳ ಪ್ರಾಯೋಗಿಕ ಶಿಕ್ಷಣವನ್ನು ನೀಡುತ್ತಿರುವ ಪುತ್ತೂರಿನ ಏಕೈಕ ಶಿಕ್ಷಣ ಸಂಸ್ಥೆ ನರೇಂದ್ರ ಪ.ಪೂ. ಕಾಲೇಜು.
ಎಲ್ಲಾರೀತಿಯ ವೈಶಿಷ್ಟ್ಯತೆಗಳನ್ನು ಹೊಂದಿರುವಆಧುನಿಕ ಹಾಗೂ ಸಾಂಪ್ರದಾಯಿಕ ಶೈಕ್ಷಣಿಕ ಮೌಲ್ಯಗಳನ್ನು ಸಮರ್ಪಕ ಪ್ರಮಾಣದಲ್ಲಿ ಅನುಷ್ಠಾನಗೊಳಿಸುತ್ತಿದೆ ನರೇಂದ್ರ ಪ.ಪೂ. ಕಾಲೇಜು.
ವ್ಯವಸ್ಥೆ ,ಸೌಲಭ್ಯ ಮತ್ತು ಶಿಕ್ಷಣದ ಗುಣಮಟ್ಟದಲ್ಲಿ ಈ ಸಂಸ್ಥೆಯುಅತ್ಯಲ್ಪಅವಧಿಯಲ್ಲಿಯೇ ಪ್ರತಿಷ್ಠಿತ ಸಂಸ್ಥೆಗಳ ಸಾಲಿಗೆ ಸೇರ್ಪಡೆಗೊಂಡಿದೆ.
ದಾಖಲಾತಿ ಆರಂಭ: ಈಗಾಗಲೇ ಪ್ರಥಮ ಪಿಯುಸಿಗೆ ದಾಖಲಾತಿ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವೆಬ್ಸೈಟ್ www.narendrapu.vivekanandaedu.org ಅಥವಾ ಮೊಬೈಲ್ ಸಂಖ್ಯೆ: 9481917888,08251-298555ನ್ನು ಸಂಪರ್ಕಿಸಬಹುದು. ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.










