






ವಾಣಿಜ್ಯ, ಮತ್ತು ವಿಜ್ಞಾನ ವಿಭಾಗ ಶೇ.100


ಕೆಯ್ಯೂರು : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು,ಕೆಪಿಎಸ್ ಕೆಯ್ಯೂರು ಇಲ್ಲಿ ಪರೀಕ್ಷೆಗೆ ಹಾಜರಾದ 76 ವಿದ್ಯಾರ್ಥಿಗಳಲ್ಲಿ 75 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ 99 ಫಲಿತಾಂಶ ಬಂದಿರುತ್ತದೆ.



ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 22 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಸತತವಾಗಿ 5 ನೇ ಬಾರಿ ಶೇ 100 ಫಲಿತಾಂಶ ಬಂದಿರುತ್ತದೆ. 7 ವಿದ್ಯಾರ್ಥಿಗಳು ವಿಶಿಷ್ಟಶ್ರೇಣಿ,14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ದೀಕ್ಷಾ ಎಂ ಡಿ ಅತೀ ಹೆಚ್ಚು 577 ಅಂಕಗಳನ್ನು ಪಡೆದಿರುತ್ತಾರೆ.ಬಿಂದುಶ್ರೀ ಎಂ ಬಿ 553,ನಿಖಿತಾ 543,ಆಯಿಷತ್ ತಸ್ನೀಂ 521,ಖತೀಜತುಲ್ ಶಹೀಮ 520,ಫಾತಿಮತ್ ಅರ್ಷೀದ 516, ಆಯಿಷತ್ ಸುಹೈಲ 515 ಅಂಕಗಳನ್ನು ಗಳಿಸಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 100 ಫಲಿತಾಂಶ ಬಂದಿರುತ್ತದೆ. 18 ವಿದ್ಯಾರ್ಥಿಗಳು ವಿಶಿಷ್ಟಶ್ರೇಣಿ,15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮುಹಮ್ಮದ್ ಸುಝಾನ್ ಐ ಪಿ ಅತೀ ಹೆಚ್ಚು 588 ಅಂಕ,ಫಾತಿಮತ್ ಶಹನಾಝ್ 584,ಮನ್ವಿತ್ 583,ಫಾತಿಮತ್ ಮುಫೀದ 574, ದೀಕ್ಷಿತ 566,ಮನೀಶ್ ರೈ ಎಂ 558,ಫಾತಿಮತ್ ಫೈರೂಜ 556, ಆಯಿಷತ್ ಶಮ್ನ 542, ಲೋಕೇಶ್ 542,ಆಯಿಷತ್ ಅಪ್ಸೀನ 541,ಫಾತಿಮತ್ ಸಮೀದ 536,ಜಯೇಶ್ ಎಂ 536, ಹೆಚ್ ಎಂ ಫಾಝಿಲಾ 530,ಮೋಕ್ಷಿತ್ ಎನ್ 525,ಪ್ರಥಮ್ ಸಿ 518,ಪ್ರಫುಲ್ ಪಿ ಟಿ516, ಶರಧಿ 515,ಹಾಗೂ ಭುವನೇಶ್ ಕೆ ಎಸ್ 511 ಅಂಕಗಳನ್ನು ಪಡೆದಿರುತ್ತಾರೆ.
ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 21 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 95 ಫಲಿತಾಂಶ ಬಂದಿರುತ್ತದೆ. 2 ವಿದ್ಯಾರ್ಥಿಗಳು ವಿಶಿಷ್ಟಶ್ರೇಣಿ,15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ .ಅತೀ ಹೆಚ್ಚು ಅಕ್ಷತ್ ಬಿ 564,ಕೀರ್ತನ್ ಜಿ 530 ಅಂಕಗಳನ್ನು ಪಡೆದಿರುತ್ತಾರೆ.










