ಭಾವಿ ವಧು-ವರರ ಸಮಾವೇಶ

0

ಮಂಗಳೂರು: ಏ.26ನೇ ಆದಿತ್ಯವಾರ ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ ಯೆಯ್ಯಾಡಿ ಮಂಗಳೂರು ಇಲ್ಲಿ ಆರ್ಯ ತಂಡ ಶ್ರೀ ಶಾರದಾಂಬಾ ಸೇವಾ ಸಮಾಜ ಸುಧಾರಣಾ ಸಂಘ(ರಿ.) ಬಪ್ಪಳಿಗೆ ಪುತ್ತೂರು ಮತ್ತು ಶ್ರೀ ಸರಸ್ವತಿ ನಾರಾಯಣೀ ಆರ್ಯ ಮರಾಟಿ ಸೇವಾ ಸಮಾಜ ಸುಧಾರಣಾ ಸಂಘ(ರಿ.) ಬಾರ್ಕೂರು ಇವರ ಸಹಕಾರದೊಂದಿಗೆ ಸಮಾಜದ ಭಾವಿ ವಧು-ವರರ ಸಮಾವೇಶವನ್ನು ಆಯೋಜಿಸಲಾಯಿತು.

ಆರ್ಯ ತಂಡದ ಗೌರವಾಧ್ಯಕ್ಷ ಪ್ರಭಾಕರ ನಾಯಕರು ವೇದಿಕೆಯ ಅಧ್ಯಕ್ಷರಾಗಿ, ಮುಖ್ಯ ಅತಿಥಿಗಳಾಗಿ ಶಾರದಾಂಬಾ ಸೇವಾ ಸಮಾಜ ಸಂಘದ ಅಧ್ಯಕ್ಷ ಮತ್ತು ಆರ್ಯ ತಂಡದ ಅಧ್ಯಕ್ಷರೂ ಆದ ಗೋಪಾಲಕೃಷ್ಣ ನಾಯಕ್ , ಶ್ರೀ ಸರಸ್ವತಿ ನಾರಾಯಣೀ ಆರ್ಯ ಮರಾಟಿ ಸೇವಾ ಸಮಾಜದ ಅಧ್ಯಕ್ಷ ರವಿ ನಾಯಕ್ ಮಿಯಾರ್ , ಆರ್ಯ ತಂಡದ ಗೌರವಾನ್ವಿತರೂ ದೇವಿ ಗ್ಲಾಸ್ ಹೌಸ್ ನ ಮಾಲಕ ಸುರೇಶ್ ನಾಯಕ್ ಪರ್ಕಳ, ಆರ್ಯ ತಂಡದ ಉಪಾಧ್ಯಕ್ಷ ವಿಧುಶೇಖರ ನಾಯಕ್, ಶ್ರೀ ಶಾರದಾಂಭ ಸೇವಾ ಸಮಾಜದ ನಿರ್ದೇಶಕರಾದ ಶಾರದಾ ಕೇಶವ ನಾಯಕ್ ಸಾಲ್ಮರ ಪುತ್ತೂರು, ಶ್ರೀ ಸರಸ್ವತಿ ನಾರಾಯಣೀ ದೇವಸ್ಥಾನದ ಆಡಳಿತ ಮುಕ್ತೇಶರರಾದ ಶ್ರೀ ಶಂಕರ ನಾಯಕ್ ಬ್ರಹ್ಮಾವರ, ಶ್ರೀ ಮಹಾಮ್ಮಾಯಿ ದೇವಸ್ಥಾನ ಸರಪಾಡಿಯ ಅರ್ಚಕರಾದ ಗಿರಿಧರ ಎಸ್, ಆರ್ಯ ತಂಡದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಂಗಳೂರು ಇದ್ದರು. ಪ್ರಭಾಕರ ನಾಯಕರು ಮತ್ತು ಅತಿಥಿಗಳು ದ್ವೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಶ್ರೀ ರವಿನಾಯಕ್ ಮಿಯಾರ್ ಮಾತಾನಾಡಿ ಇಂತಹ ಒಂದು ಕಾರ್ಯಕ್ರಮ ಆರ್ಯ ತಂಡದ ಅಡಿಯಲ್ಲಿ ಸಮಾಜದ ಎರಡೂ ಸಂಘಗಳ ಸಹಕಾರದೊಂದಿಗೆ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಷಯ, ಇದಕ್ಕಾಗಿ ಆರ್ಯ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಾ ವರ್ಷಕ್ಕೊಮ್ಮೆ ಅಥವಾ ಎರಡು ವರುಷಕ್ಕೊಮ್ಮೆ ಭಾವಿ ವಧು-ವರರ ಸಮಾವೇಶ ಸಮಾಜದ ಮುಖಾಂತರ ನಡೆಯುವಂತಾಗ ಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಗೋಪಾಲಕೃಷ್ಣ ನಾಯಕ್ ಮಾತನಾಡಿ ಸಮಾಜದ ಹೆತ್ತವರು ತಮ್ಮ ಮಕ್ಕಳಿಗೆ ಮತ್ತು ಭಾವಿ ವಧು-ವರರು ತಮ್ಮ ಜೀವನ ಸಂಗಾತಿಯನ್ನು ಕಂಡುಕೊಳ್ಳಲು ಪಡುತ್ತಿರುವ ಕಷ್ಟವನ್ನ ಅರಿತು ಆರ್ಯ ತಂಡ ಅವರ ಕಷ್ಟಕ್ಕೆ ಸ್ಪಂದಿಸುವ ದೃಷ್ಟಿಯಲ್ಲಿ ಸಮಾಜದ ಎರಡೂ ಸಂಘಗಳ ಸಹಕಾರದೊಂದಿಗೆ ನಡೆಸುತ್ತಿರುವ ಈ ಕಾರ್ಯಕ್ರಮ ಜಗನ್ಮಾತೆಯರ ಜಗದ್ಗುರುಗಳ , ಹಿರಿಯರ ಆಶೀರ್ವಾದದೊಂದಿಗೆ ಭಾವಿ ವಧು-ವರರಿಗೆ ಅನುಕೂಲವಾಗುವಂತಾಗಲಿ ಎಂದು ಪ್ರಾರ್ಥಿಸಿದರು. ಆರ್ಯ ತಂಡದ ಪ್ರಥಮದಿಂದ ಇಂದಿನವರೆಗೂ ತನು ಮನ ಧನದಿಂದ ಸಹಕರಿಸುತ್ತಿರುವ ಸಮಸ್ತ ಸದಸ್ಯರುಗಳಿಗೆ ಶಿರಬಾಗಿ ಕೃತಜ್ಞತೆಯನ್ನು ತಿಳಿಸಿದ್ದಲ್ಲದೆ ಎರಡೂ ಸಂಘಗಳ ಪದಾಧಿಕಾರಿಗಳು ಸದಸ್ಯರಿಗೆ ವಂದನೆಗಳನ್ನು ತಿಳಿಸಿದರು. ಅತಿಥಿಗಳು ಶುಭ ಹಾರೈಸಿದರು. ವೇದಿಕೆಯ ಅಧ್ಯಕ್ಷ ಪ್ರಭಾಕರ ನಾಯಕರು ಕಾರ್ಯಕ್ರಮದ ಮೂಲ ಉದ್ದೇಶ, ಈ ಕಾರ್ಯಕ್ರಮದ ಅಗತ್ಯತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಈ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ತಳಪಾಯವಾಗಲಿ ಮುಂದೆಯೂ ಇಂತಹ ಕಾರ್ಯಕ್ರಮ ನಡೆಯುತ್ತಿರಲಿ ಎಂದು ತಿಳಿಸುತ್ತಾ ಭಾವಿ ವಧು-ವರರಿಗೆ ಶುಭ ಹಾರೈಸಿದರು.

,ಸರಸ್ವತಿ ಪ್ರಭಾಕರ ನಾಯಕ್ ಪ್ರಭಾಕರ ನಾಯಕ್ ದಂಪತಿಗಳು ದಾಂಪತ್ಯ ಜೀವನದ 50 ವರುಷಗಳನ್ನು ಪೂರೈಸಿದ ಶುಭ ಸಂದರ್ಭವನ್ನು ಅವರಿಗೆ ಸನ್ಮಾನ ಮಾಡುವುದರ ಮೂಲಕ ಆಚರಿಸಲಾಯಿತು.

ಭಾವಿ ವಧು-ವರರ ಸಮಾವೇಶದ ಪ್ರಚಾರಕ್ಕಾಗಿ ವಿಡಿಯೋ ಮುಖಾಂತರ ಪ್ರೇರೆಪಣೆ ನೀಡಿದ ಎಲ್ಲರಿಗೂ ಹೂ ನೀಡಿ ಗೌರವ ಸೂಜಿಸಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು 130 ಭಾವಿ ವಧು-ವರರು ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಪ್ರಯತ್ನಿಸಿದರು. ಬಂದವರೆಲ್ಲರೂ ಈ ಕಾರ್ಯಕ್ರಮದ ಬಗ್ಗೆ ಸಂತೋಷವನ್ನು ವ್ಯಕ್ತ ಪಡಿಸಿದ್ದಲ್ಲದೆ ಪ್ರಪ್ರಥಮವಾಗಿ ನಡೆಸಿದ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ. ಇನ್ನು ಮುಂದೆಯೂ ಇಂತಹ ಕಾರ್ಯಕ್ರಮ ನಡೆಸುವಂತೆ ಅಭಿಪ್ರಾಯಿಸಿದರು. ಆರ್ಯ ತಂಡದ ಬಗ್ಗೆ ಗೌರವವನ್ನು ವ್ಯಕ್ತ ಪಡಿಸಿದರು.

ಕೃಷ್ಣ ಕುಮಾರ್ ಸ್ವಾಗತಿಸಿದರು. ಕುಮಾರಿ ಅನ್ವೀತಾ ಕೃಷ್ಣ ಕುಮಾರ್ ಪ್ರಾರ್ಥನೆ ನೆರವೇರಿಸಿದರು. ಗೋಪಾಲಕೃಷ್ಣ ನಾಯಕ್ ಪ್ರಾಸ್ತಾಪನೆ ಮಾಡಿದರು. ಕೃಷ್ಣ ಕುಮಾರ್, ಗೋಪಾಲಕೃಷ್ಣ ಬೋಂದೇಲ್, ಶ್ರೀ ರವಿಕುಮಾರ್, ಶ್ರೀ ಶ್ರೀನಿವಾಸ ನಾಯಕ್ ಅವರು ಭಾವಿ ವಧು-ವರರ ಮಾಹಿತಿಯನ್ನು ಪಿಪಿಟಿ ಮೂಲಕ ಸ್ಕ್ರೀನಿನಲ್ಲಿ ತೋರಿಸುವ ಜವಾಬ್ದಾರಿಯನ್ನು ನಿಭಾಯಿಸಿದರು. ಶಾರದಾಂಬಾ ಸೇವಾಸಮಾಜದ ಉಪಾಧ್ಯಕ್ಷ ವಸಂತ ನಾಯಕ್ ಮುಕ್ರಂಪಾಡಿಯವರು, ಶ್ರೀ ಶಾರದಾಂಬಾ ವಿವಿಧ್ಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜಯಕುಮಾರ್ ಕೈಪಂಗಳ, ಕೇಶವ ದೈಪಿಲ, ಈಶ್ವರ ನಾಯಕ್ ಅವರ ತಂಡ ಭಾವಿ ವಧು-ವರರಿಗೆ ಸೂಕ್ತ ಅಂತ ಕಂಡು ಬಂದ ಮಾಹಿತಿಯ ಮುಂದಿನ ಮಾತುಕತೆಗಾಗಿ ಕೌಂಟರಿನಲ್ಲಿ ಇದ್ದು ಸಹಕರಿಸಿದರು.

ಧರ್ಮಾವತಿ ಗೋಪಾಲಕೃಷ್ಣ, ಮೀನಾಕ್ಷಿ ಕೃಷ್ಣ ಕುಮಾರ್, ಮಂಜುಳಾ ಶ್ರೀನಿವಾಸ್ , ಕುಮಾರಿ ಅಭೀಷ್ಟಾ, ಶ್ರೀನಿವಾಸ ನಾಯಕ್ , ಆನಂದ ಚಂದಳಿಕೆ, ಪ್ರಶಾಂತ್ ಮೂಜೂರು, ಕೃಷ್ಣ ಕುತ್ತಾರ್, ದುರ್ಗೇಶ್, ಇವರೆಲ್ಲಾ ಪ್ರವೇಶ ದ್ವಾರದಲ್ಲಿದ್ದು ಭಾವಿ ವಧು-ವರರನ್ನು ಹೂ ನೀಡಿ , ಕುಂಕುಮ ಹಚ್ಚಿ ಸ್ವಾಗತಿಸುವ, ಅವರ ಹೆಸರನ್ನ ನೋಂದಾಯಿಸುವ ಕಾರ್ಯವನ್ನು ಅತ್ಯಂತ ಉತ್ತಮ ಮಟ್ಟದಲ್ಲಿ ನಿಭಾಯಿಸಿದರು.


ಕಾರ್ಯಕ್ರಮದಲ್ಲಿ ಬೆಳಿಗ್ಗೆ ಚಾ ತಿಂಡಿ, ತಂಪು ಪಾನೀಯ,ಮಧ್ಯಾಹ್ನ ಊಟ, ಸಂಜೆಯ ಉಪಾಹಾರ ನೀಡಿ ಸತ್ಕಾರಿಸಲಾಯಿತು. ರವಿಕುಮಾರ್ ಇಡೂರು ಪೂರ್ಣ ಕಾರ್ಯಕ್ರಮದ ನಿರೂಪಣಿಯನ್ನು ಮಾಡಿದರು. ಕೃಷ್ಣ ಕುಮಾರ್ ನಿನ್ನಿಕಲ್ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here