






ಅಧ್ಯಕ್ಷ: ಶ್ರೀಕುಮಾರ್ ಬಲ್ಯಾಯ, ಪ್ರ.ಕಾರ್ಯದರ್ಶಿ: ಹರ್ಷಿತ್ ಎ.ಆರ್


ಕಾವು: ಭಾರತ ಸರಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಶ್ರೀಕುಮಾರ್ ಬಲ್ಯಾಯ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಿತ್ ಎ.ಆರ್.ರವರು ಆಯ್ಕೆಯಾಗಿದ್ದಾರೆ.




ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರ ಅಧ್ಯಕ್ಷತೆಯಲ್ಲಿ ತುಡರ್ ಸದನದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಮಹಾಸಭೆಯಲ್ಲಿ ಎಲ್ಲರ ಒಪ್ಪಿಗೆಯಂತೆ ಅಧ್ಯಕ್ಷರಾಗಿ ಶ್ರೀಕುಮಾರ್ ಬಲ್ಯಾಯ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಿತ್ ಎ.ಆರ್ ರವರನ್ನು ಅವಿರೋಧವಾಗಿ ಘೋಷಣೆ ಮಾಡಲಾಯಿತು. ಉಳಿದಂತೆ ಉಪಾಧ್ಯಕ್ಷರಾಗಿ ಅಜಿತ್ ಕುಲಾಲ್ ಮದ್ಲ, ಜತೆ ಕಾರ್ಯದರ್ಶಿಯಾಗಿ ರತೀಶ್ ಪಾಟಾಳಿಯವರನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ನನ್ಯರವರು ವಾರ್ಷಿಕ ಅವಲೋಕನ ನಡೆಸಿ, 15ನೇ ವರ್ಷದ ಖರ್ಚು-ವೆಚ್ಚ ಮಂಡಿಸಿದರು. ಬಳಿಕ 16ನೇ ವರ್ಷದಲ್ಲಿ ಯುವಕ ಮಂಡಲದ ಕಾರ್ಯಯೋಜನೆಯ ಬಗ್ಗೆ ಸದಸ್ಯರ ಅಭಿಪ್ರಾಯ ಕೇಳಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಯತೀಶ್ ರೈ ಮದ್ಲ, ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ, ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಅಧ್ಯಕ್ಷ ಲಿಂಗಪ್ಪ ನಾಯ್ಕ ನನ್ಯ, ಕಾರ್ಯದರ್ಶಿ ಜಗದೀಶ ನಾಯ್ಕ ಆಚಾರಿಮೂಲೆ, ಸದಸ್ಯರಾದ ಸಂಕಪ್ಪ ಪೂಜಾರಿ ಚಾಕೋಟೆ, ನಿರಂಜನ ಕಮಲಡ್ಕ, ಬಾಲಕೃಷ್ಣ ಪಾಟಾಳಿ ನನ್ಯ, ರಾಜೇಶ್ ಬಿ, ರಮೇಶ್ ಗೌಡ ಆಚಾರಿಮೂಲೆ, ಭವಿತ್ ರೈ ಮದ್ಲ, ದಿಶಾಂತ್ ಮದ್ಲ, ರಾಘವ ಪಿ.ಎಸ್, ಜಗನ್ನಾಥ ಗೌಡ ಪರನೀರುರವರು ಪಾಲ್ಗೊಂಡಿದ್ದರು.
ನೂತನ ಅಧ್ಯಕ್ಷರ ಪರಿಚಯ:
ಮಾಡ್ನೂರು ಗ್ರಾಮದ ಕಾವು ಮದ್ಲ ನಿವಾಸಿ, ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ, ಜ್ಯೋತಿಷಿಯೂ ಆಗಿರುವ ಸುಬ್ರಾಯ ಬಲ್ಯಾಯ ಮತ್ತು ಪ್ರಭಾ ದಂಪತಿಗಳ ಪುತ್ರನಾಗಿರುವ ಶ್ರೀಕುಮಾರ್‌ರವರು ತುಡರ್ ಯುವಕ ಮಂಡಲದ ಆರಂಭಿಕ ಸದಸ್ಯನಾಗಿದ್ದು, ಯುವಕ ಮಂಡಲದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷನಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ತನ್ನ ತಂದೆಯ ಮಾರ್ಗದರ್ಶನದಲ್ಲಿ ಸುಳ್ಯ ದುಗಲಡ್ಕದಲ್ಲಿ ಜ್ಯೋತಿಷಿ ವೃತ್ತಿಯನ್ನು ಮಡುತ್ತಿರುವ ಶ್ರೀಕುಮಾರ್‌ರವರು ತುಡರ್ ಯುವಕ ಮಂಡಲದ ಮೂಲಕ ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯ ಪರಿಚಯ:
ಮಾಡ್ನೂರು ಗ್ರಾಮದ ಕಾವು ಆಚಾರಿಮೂಲೆ ನಿವಾಸಿ, ತುಡರ್ ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಮತ್ತು ದೇವಕಿ ದಂಪತಿಗಳ ಪುತ್ರನಾಗಿರುವ ಹರ್ಷಿತ್ ರವರು ಕಳೆದ ೫ ವರ್ಷದಿಂದ ಯುವಕ ಮಂಡಲದಲ್ಲಿ ಸಕ್ರಿಯ ಸದಸ್ಯನಾಗಿ, ಜತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಹರ್ಷಿತ್‌ರವರು ಮಂಗಳೂರು ಕೃಷಿಕರ ಸಹಕಾರ ಸಂಘ(ಮಾಸ್ ಲಿ.)ದಲ್ಲಿ ಉದ್ಯೋಗಿಯಾಗಿ ವೃತ್ತಿ ಜೀವನ ಮಾಡುತ್ತಿದ್ದಾರೆ.
ಮೇ.1ರಂದು ಅಧಿಕಾರ ಸ್ವೀಕಾರ ಕಾರ್ಯಕ್ರಮ:
ಶಿಸ್ತು, ಸಂಘಟನೆ, ಸಮಾಜಮುಖಿ ಕಾರ್ಯದ ಮೂಲಕ ಹೆಸರುವಾಸಿಯಾಗಿರುವ ತುಡರ್ ಯುವಕ ಮಂಡಲಕ್ಕೆ 16ನೇ ವರ್ಷದಲ್ಲಿ ಯುವ ಸದಸ್ಯರನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ, 16ನೇ ವರ್ಷದಲ್ಲೂ ಇನ್ನಷ್ಟು ಸಮಾಜಮುಖಿ ಕೆಲಸಗಳು, ಸೇವೆಗಳು, ಕೊಡುಗೆಗಳನ್ನು ಅರ್ಪಣೆ ಮಾಡಲು ಯುವಕ ಮಂಡಲ ಸಂಘಟಿತವಾಗಿ ಬಲಿಷ್ಟವಾಗಿದೆ. ಯುವಕರನ್ನು ಸಮಾಜಮುಖಿ ಕಾರ್ಯದ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವುದೇ ನಮ್ಮ ಮೂಲ ಉದ್ದೇಶವಾಗಿದೆ.
ಮೇ.1ರಂದು ಸಂಜೆ ಮದ್ಲ ತುಡರ್ ಸದನದಲ್ಲಿ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ, ಜತೆಗೆ ಯುವಕ ಮಂಡಲಕ್ಕೆ ಸೇರ್ಪಡೆಯಾಗಲಿರುವ 10 ಜನ ಯುವಕರ ಸೇರ್ಪಡೆ ಕಾರ್ಯಕ್ರಮ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳಿಸಿದ ಮಾಡ್ನೂರು ಗ್ರಾಮದ ಎಲ್ಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ನಡೆಯಲಿದೆ.
ಸುಬ್ರಾಯ ಬಲ್ಯಾಯ
-ಸ್ಥಾಪಕಾಧ್ಯಕ್ಷರು ತುಡರ್ ಯುವಕ ಮಂಡಲ









