ಎ.30: ಮೆಸ್ಕಾಂ ಪುತ್ತೂರು ವಿಭಾಗೀಯ ಕಚೇರಿಯ ಹಿರಿಯ ಸಹಾಯಕ ಯಂ. ರತ್ನಾಕರ ನಾಯಕ್ ಕರ್ತವ್ಯದಿಂದ ನಿವೃತ್ತಿ

0

ಪುತ್ತೂರು: ಮೆಸ್ಕಾಂ ಪುತ್ತೂರು ವಿಭಾಗೀಯ ಕಚೇರಿಯ ಹಿರಿಯ ಸಹಾಯಕರಾದ ಯಂ. ರತ್ನಾಕರ ನಾಯಕ್‌ರವರು ಎ.30ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ.


ಬಂಟ್ವಾಳ ತಾಲೂಕಿನ ಮಾಣಿ ದಿ| ಯಂ ವಿಶ್ವನಾಥ ನಾಯಕ್ ಹಾಗೂ ದಿ| ಪ್ರೇಮ ನಾಯಕ್ ದಂಪತಿಯ ಪುತ್ರರಾದ ಯಂ. ರತ್ನಾಕರ ನಾಯಕ್‌ರವರು ಮಾಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಾಣಿ ಕರ್ನಾಟಕ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು1986ರಲ್ಲಿ ಕರ್ನಾಟಕ ವಿದ್ಯುತ್ ಮಂಡಳಿಯ ಬಳ್ಳಾರಿ ನಗರ ಉಪವಿಭಾಗದಲ್ಲಿ ಕಿರಿಯ ಸಹಾಯಕರಾಗಿ ಕರ್ತವ್ಯಕ್ಕೆ ಸೇರಿದ್ದರು. 2 ವರ್ಷ ಸೇವೆ ಸಲ್ಲಿಸಿ 1988ರಲ್ಲಿ ಪುತ್ತೂರು ನಗರ ಉಪವಿಭಾಗಕ್ಕೆ ವರ್ಗಾವಣೆಗೊಂಡು 9 ವರ್ಷ ಸೇವೆ ಸಲ್ಲಿಸಿ 1997ರಲ್ಲಿ ಸಹಾಯಕ ಹುದ್ದೆಗೆ ಪದೋನ್ನತಿಗೊಂಡು ಬಂಟ್ವಾಳ ಉಪವಿಭಾಗದ ವಿಟ್ಲ ಕಂದಾಯ ಶಾಖೆಗೆ ವರ್ಗಾವಣೆಗೊಂಡು 3 ವರ್ಷ ಸೇವೆ ಸಲ್ಲಿಸಿ 2000ದಲ್ಲಿ ಪುತ್ತೂರು ವಿಭಾಗೀಯ ಕಛೇರಿಗೆ ವರ್ಗಾವಣೆಗೊಂಡರು. ಬಳಿಕ 2005ರಲ್ಲಿ ಹಿರಿಯ ಸಹಾಯಕರಾಗಿ ಪದೋನ್ನತಿಗೊಂಡು ಒಟ್ಟು 40 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಲಿದ್ದಾರೆ.

ಇವರು ಪತ್ನಿ ಯಂ. ರಾಧಿಕಾ ನಾಯಕ್, ಪುತ್ರ ಯಂ. ಸಂತೋಷ್ ನಾಯಕ್‌ರವರೊಂದಿಗೆ ಬನ್ನೂರಿನ ಜೋಡುಕಟ್ಟೆಯಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here