ಮೊಡಪ್ಪಾಡಿಗುತ್ತು ತರವಾಡು ಮನೆಯಲ್ಲಿ ದೈವಗಳ ವಾರ್ಷಿಕ ನೇಮೋತ್ಸವ-ವೈದಿಕ ಕಾರ್ಯಕ್ರಮಗಳು

0

ಪುತ್ತೂರು: ಒಳಮೊಗ್ರು ಗ್ರಾಮದ ಮೊಡಪ್ಪಾಡಿಗುತ್ತು ತರವಾಡು ಮನೆಯ ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಏ.29ರಿಂದ ಏ.30ರವರೆಗೆ ನಡೆಯಲಿರುವ ವಾರ್ಷಿಕ ನೇಮೋತ್ಸವದ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ವೇದಮೂರ್ತಿ ದಿನೇಶ ಮರಡಿತ್ತಾಯರವರ ನೇತೃತ್ವದಲ್ಲಿ ಏ.29ರಂದು ಚಾಲನೆ ದೊರೆಯಿತು.‌


ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮಹಾಗಣಪತಿ ಹೋಮ, ನಾಗತಂಬಿಲ, ದೈವಗಳಿಗೆ ತಂಬಿಲ, ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಕುಟುಂಬದ ಯಜಮಾನ ಜತ್ತಪ್ಪ ರೈ ಮೊಡಪ್ಪಾಡಿಗುತ್ತು ಸೇರಿದಂತೆ ಕುಟುಂಬಸ್ಥರು, ಬಂಧುಗಳು, ಮಿತ್ರರು, ಉಪಸ್ಥಿತರಿದ್ದರು.


ಸಾಯಂಕಾಲ ಗಂಟೆ 6ರಿಂದ ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಅನ್ನಸಂತರ್ಪಣೆ ಬಳಿಕ ಶ್ರೀ ಜಠಾಧಾರಿ ದೈವದ ಮಹಿಮೆ ನಡೆಯಲಿದೆ.

LEAVE A REPLY

Please enter your comment!
Please enter your name here