







ಉಪ್ಪಿನಂಗಡಿ :ತೀರ್ಥಂಕರರು ಭೋಧಿಸಿದ ಆರು ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಿ ಜೀವನ ಸಾರ್ಥಕ್ಯವನ್ನು ಕಾಣಬೇಕೆಂದು ಜೈನ ದಿಗಂಬರ ಪರಂಪರೆಯ ಪರಮಪೂಜ್ಯ 108 ಶ್ರೀ ವೀರಸಾಗರ ಮುನಿ ಮಹಾರಾಜರು ಕರೆ ನೀಡಿದರು.


ಅವರು ಉಪ್ಪಿನಂಗಡಿ ಗಾಂಧೀಪಾರ್ಕ್ ಎಂಬಲ್ಲಿ ಹೆದ್ದಾರಿ ಪಾರ್ಶ್ವದಲ್ಲಿ ಪುನರ್ ನಿರ್ಮಿತ ಕದಿಕಾರು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಏಕಶಿಲಾ ಚತುರ್ಮುಖ ಮಾನಸ್ತಂಭೋಪರಿ ಶ್ರೀ ಜಿನಬಿಂಬಗಳ ಪಂಚಕಲ್ಯಾಣ ಹಾಗೂ ಧಾಮ ಸಂಪ್ರೋಕ್ಷಣಾಪೂರ್ವಕ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತೀ ದೇವಿ ಬಿಂಬಗಳ ಪುನರ್ ಪ್ರತಿಷ್ಠಾ ಮಹೋತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಲ ಪ್ರವಚನ ನೀಡುತ್ತಿದ್ದರು.




ದೇವಪೂಜೆ , ಗುರುಸೇವೆ, ಸ್ವ ಅಧ್ಯಾಯ , ಸಂಯಮ , ತಪ, ದಾನ ಇವು ಕಡ್ದಾಯ ಅನುಷ್ಠಾನದ ವಿಧಿಗಳಾಗಿದ್ದು, ಇದರ ಬಗ್ಗೆ ಅಸಡ್ಡೆ ಸಲ್ಲದು, ತಾನೇ ಕಡ್ದಾಯವಾಗಿ ಪಾಲ್ಗೊಳ್ಳುವುದೇ ಭಗವಂತನ ಪ್ರೀತಿಗೆ ಪಾತ್ರವಾಗುವುದಾಗಿದೆ ಎಂದರು.
ಶ್ರೀಕ್ಷೇತ್ರ, ಕಂಬದಹಳ್ಳಿ ಇಲ್ಲಿನ ಪರಮಪೂಜ್ಯ ಸ್ವಸ್ತಿಶ್ತೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಮಂಗಲ ಪ್ರವಚನ ನೀಡಿ ,ಬಸದಿ ಕೇವಲ ಅಲ್ಲಿನ ಪುರೋಹಿತರಿಗಾಗಿಲ್ಲ. ಬದಲಾಗಿ ಅದು ಸಮಸ್ತ ಜಿನ ಭಕ್ತರದ್ದಾಗಿದೆ. ಅದಕ್ಕಾಗಿ ಬಸದಿಗೆ ದಿನ ನಿತ್ಯ ಭೇಟಿ ನೀಡಿ ತಿಳಿದೋ ತಿಳಿಯದೆಯೋ ಮಾಡಿದ ಪಾಪ ಕರ್ಮಗಳನ್ನು ಕಳೆಯಬೇಕೆಂದರು.

ಬಸದಿಯಲ್ಲಿ ಬುಧವಾರದಂದು ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಇಂದ್ರಪ್ರತಿಷ್ಠೆ, ತೋರಣ ಮೂಹೂರ್ತ, ಪಂಚಕಲ್ಯಾಣ ಮಂಟಪ ಪ್ರವೇಶ, ಯಕ್ಷ ಪ್ರತಿಷ್ಠೆ, ವಿಮಾನ ಶುದ್ದಿ ವಿಧಾನ, 81 ಕಲಶಗಳಿಂದ ಮಂದಿರ- ಮಾನಸ್ತಂಭ- ಶಿಖರ ಶುದ್ದಿ ವಿಧಾನ , ಮುಖ ವಸ್ತ್ರ ಉದ್ಘಾಟನೆ, ದ್ವಜಾರೋಹಣ , ನಾಂದಿ ಮಂಗಲ ಪೂಜಾ ವಿಧಾನ , ಆರಾಧನಾ ಪೂರ್ವಕ ಶ್ರೀ ಕ್ಷೇತ್ರಪಾಲ ಪ್ರತಿಷ್ಠಾ ವಿಧಾನ , ಪಂಚ ಕಲ್ಯಾಣ ಆರಾಧನಾ ವಿಧಾನ ,- ಯಾಗ ಮಂಡಲ ಆರಾಧನಾ ವಿಧಾನ , ಮೃತ್ತಿಕಾ ಸಂಗ್ರಹಣೆ, ಅಂಕುರಾರ್ಪಣೆ, ಪಂಚಕಲ್ಯಾಣ ಮಂಟಪದಲ್ಲಿ ಮಾತುರಾಹ್ವಾನಾದಿ ಕ್ರಿಯಾಯುಕ್ತ ಗರ್ಭಾವತರಣ ಕಲ್ಯಾಣ ಪೂರ್ವ ವಿಧಿ ,ಭೇರಿತಾಡನ ವಿಧಿ, ಮಂಗಲ ಸೂತ್ರ ಬಂಧನ , ಶ್ರೀ ಸ್ವಾಮಿಗೆ ನವ ಕಲಶಾಭಿಷೇಕ, ಮಹಾಪೂಜೆ. ಮಹಾಮಂಗಳಾರತಿ, ಶ್ರೀ ಜಿನಗಂಧೋಧಕ ವಿಧಿವಿಧಾನಗಳು ನಡೆದವು. ಪ್ರತಿಷ್ಠಾಚಾರ್ಯರಾಗಿ ಸೂರತ್ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಜ್ರಕುಮಾರ್ ಜೈನ್ , ಕಾರ್ಯಾಧ್ಯಕ್ಷ ಧನ್ಯಕುಮಾರ್ ರೈ, ಪಂಚಕಲ್ಯಾಣ ಸಮಿತಿಯ ಅಧ್ಯಕ್ಷ ವಿಧ್ಯಾಧರ ಜೈನ್ , ಕಾರ್ಯದರ್ಶಿ ಶಾಂತಿಪ್ರಕಾಶ್, ಸಮಿತಿಯ ಸದಸ್ಯರಾದ ಪ್ರಶಾಂತ್ ಜೈನ್ ಬಾರ್ಯ , ಅನುದೀಪ್ ರೈ, ನಿತೇಶ್ ಕುಮಾರ್ ಪುತ್ತಿಲ, ಪ್ರಭಾಕರ್ ರೈ, ರಕ್ಷಿತ್ ಕುಮಾರ್ ಪುತ್ತಿಲ, ಜಯರಾಜ್ ಜಾರಳಿಕೆ, ಸುಭಾಶ್ ಜೈನ್ , ನಿರಂಜನ್ ಕೊಂಡೆ, ಅರುಣಾ ಡಿ ರೈ , ಪಾರ್ಶ್ವನಾಥ್ ನೆಲ್ಯಾಡಿ, ಸಮಂತ್ ನೆಲ್ಯಾಡಿ, ಪುನಿತ್ ನೆಲ್ಯಾಡಿ, ಉದಯ ಕುಮಾರ್ ಜೈನ್ , ಅಭಯ್ ಜೈನ್, ವಿಜೇತ್ ಜೈನ್ ,ಸಂಪತ್ ಕುಮಾರ್ ಅಲಂಕಾರು, ಸನ್ಮತಿ ಹೆಗ್ಡೆ, ಸತೀಶ್ ಪಡಿವಾಳ್ , ಮಹೇಶ್ ಪಡಿವಾಳ ಮೊದಲಾದವರು ಭಾಗವಹಿಸಿದ್ದರು.
ಮಿತ್ರಸೇನ್ ಜೈನ್ ಕಾರ್ಯಕ್ರಮ ನಿರೂಪಿಸಿದರು.










