







ಪುತ್ತೂರು: ಸುಳ್ಯದಿಂದ ಬೆಳ್ಳಾರೆ-ಸವಣೂರು- ಅಲಂಕಾರು- ಬಲ್ಯ ಕ್ರಾಸ್ ಮಾರ್ಗವಾಗಿ ನೆಲ್ಯಾಡಿ ಮೂಲಕ ಸೌತಡ್ಕ ದೇವಾಲಯ ಧರ್ಮಸ್ಥಳಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಇದರಿಂದ ಸುಳ್ಯ- ಬೆಳ್ಳಾರೆ- ಸವಣೂರು ಭಾಗದವರಿಗೆ ಸೌತಡ್ಕ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಲು ಅತೀ ಹತ್ತಿರದ ದಾರಿ ಆಗುತ್ತದೆ. ಸುಳ್ಯ ಭಾಗದವರು ಧರ್ಮಸ್ಥಳಕ್ಕೆ ತಲುಪಲು ಅತೀ ಹತ್ತಿರದ ದಾರಿ ಬೆಳ್ಳಾರೆ-ಸವಣೂರು- ಅಲಂಕಾರು- ಬಲ್ಯ- ನೆಲ್ಯಾಡಿ ಮುಖಾಂತರವೇ ಆಗಿದ್ದು, ಈ ಭಾಗದ ಪ್ರಯಾಣಿಕರು ಅತೀ ಕಡಿಮೆ ಅವಧಿಯಲ್ಲಿ ಧರ್ಮಸ್ಥಳಕ್ಕೆ ತಲುಪಲು ಸಾಧ್ಯವಾಗಿರುವುದರಿಂದ ಸಂಬಂಧಪಟ್ಟ ಜನ ಪ್ರತಿನಿಧಿಗಳು ಈ ಬಗ್ಗೆ ಈ ಕೂಡಲೇ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸುವ ಮೂಲಕ ಸುಳ್ಯ ಮತ್ತು ಕಡಬ ತಾಲೂಕಿನ ಅಸಂಖ್ಯಾತ ಭಕ್ತರಿಗೆ ಅನುಕೂಲಮಾಡಿಕೊಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.













