







ಪುತ್ತೂರು: ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್,ಉತ್ತಮ ಕೃಷಿಕ,ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳದ ಕೋಶಾಧಿಕಾರಿ, ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ರೋ.ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಇವರ 75 ನೇ ವರ್ಷದ ಹುಟ್ಟುಹಬ್ಬ ಆಚರಣೆ ಕೊಡಿಂಬಾಡಿಯ ಬೆಳಿಪ್ಪಾಡಿ ಹೆಗ್ಡೆಹಿತ್ಲು ಮನೆಯಲ್ಲಿ ನಡೆಯಿತು.



ಈ ಸಂದರ್ಭದಲ್ಲಿ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ,ರೋಟರಿ ಕ್ಲಬ್ ಪುತ್ತೂರಿನ ಅಧ್ಯಕ್ಷರಾರ ರೋ.ಡಾ. ಶ್ರೀಪ್ರಕಾಶ್ ಬಿ., ಕಾರ್ಯದರ್ಶಿ ರೋ. ಸುಬ್ಬಪ್ಪ ಕೈಕಂಬ, ಸೀತರಾಮ ಶೆಟ್ಟಿ ಯವರ ಪತ್ನಿ ಪೂರ್ಣಿಮಾ ಶೆಟ್ಟಿ,ಪುತ್ರ ಕಾರ್ತಿಕ್ ಶೆಟ್ಟಿ, ಪುತ್ರಿ ಕೃತಿಕಾ ಶೆಟ್ಟಿ. ಅಳಿಯ ನಿತಿನ್ ಶೆಟ್ಟಿ,ಸೊಸೆ ಪವಿತ್ರ ಶೆಟ್ಟಿ ಮೊಮ್ಮಕ್ಕಳಾದ ನಿಹಾನ್ ಶೆಟ್ಟಿ, ನಿವಾನ್ಶಿ ಶೆಟ್ಟಿ,ಅಥರ್ವ್‌ಶೆಟ್ಟಿ, ಆತ್ವಿ ಶೆಟ್ಟಿ,ಎಂ.ಜಿ.ರೈ,ತಾರಾ ಜೆ. ರೈ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.













