







ಪುತ್ತೂರು: ಮೇ.8ರಂದು ಸುರಿದ ಭಾರೀ ಮಳೆಯ ಸಂದರ್ಭ ಸಿಡಿಲು ಬಡಿದು ಮನೆಗೆ ಹಾನಿ ಉಂಟಾಗಿರುವ ಘಟನೆ ಶಾಂತಿಗೋಡು ಗ್ರಾಮದ ಆನಡ್ಕ ಮರಕ್ಕೂರು ಎಂಬಲ್ಲಿ ನಡೆದಿದೆ.



ಮರಕ್ಕೂರು ಸುಗಂಧಿ ಎಂಬವರ ಮನೆಗೆ ಹಾನಿಯಾಗಿದ್ದು, ಅವರ ಮನೆಯ ವಿದ್ಯುತ್ ಸ್ವಿಚ್ ಬೋರ್ಡ್ ಗಳು ಸುಟ್ಟುಹೋಗಿದೆ. ಮನೆಯ ಪಕ್ಕದಲ್ಲಿರುವ ತೆಂಗಿನ ಮರಗಳಿಗೆ ಸಿಡಿಲು ನೇರವಾಗಿ ಬಡಿದ ಪರಿಣಾಮ 3 ತೆಂಗಿನ ಮರಗಳು ಸುಟ್ಟುಹೋಗಿವೆ. ಮನೆಯ ಪಕ್ಕದಲ್ಲಿದ್ದ ಶೆಡ್ ನ ಶೀಟ್ ಗಳು ಹಾರಿ ಹೋಗಿವೆ. ಮನೆಯ ವರಾಂಡದ ಆಧಾರ ಕಂಬ, ದಾರಂದ ಭಾಗದಲ್ಲಿ ಹಾನಿಗೊಳಗಾಗಿ ಸಿಮೆಂಟ್ ಎದ್ದು ಹೋಗಿವೆ. ವಿದ್ಯುತ್ ಸ್ವಿಚ್ ಬೋರ್ಡ್, ಬಲ್ಬ್ ಗಳು ಹಾನಿಗೊಳಿಗಾಗಿವೆ. ಮನೆ ಕೆಲವೊಂದು ಕಡೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ರೀತಿಯಲ್ಲಿ ಸುಟ್ಟ ಕಲೆಗಳು ಗೋಚರಿಸುತ್ತಿವೆ. ಮನೆಯೊಳಗೆ ಮನೆಯವರು ಇದ್ದರೂ ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.



ಸುಗಂಧಿ ಯವರ ಪತಿ ರಘುನಾಥ ರವರು ಪುತ್ತೂರಿನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದು, ಮನೆಯಲ್ಲಿ ಪತ್ನಿ, ತಂಗಿ ಮತ್ತು ತಂಗಿ ಮಕ್ಕಳೊಂದಿಗೆ ವಾಸವಾಗಿದ್ದಾರೆ. ಸಂದೇಶ್ ರವರೂ ವಿಕಲಚೇತನರಾಗಿ ಅನಾರೋಗ್ಯದಿಂದಿದ್ದಾರೆ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಮನೆಯವರಿಗೆ ಇದೀಗ ವಿದ್ಯುತ್ ವೈರಿಂಗ್ ಸಂಪೂರ್ಣ ದುರಸ್ತಿಗೊಳಿಸಬೇಕಾಗಿದೆ. ಸುಮಾರು 50,000 ಕ್ಕಿಂತ ಹೆಚ್ಚು ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.









