ವಿಟ್ಲ: ಪರವಾನಿಗೆಯ ಅವಧಿ ಮುಗಿದರೂ ಕೆಂಪುಕಲ್ಲು ಗಣಿಗಾರಿಕೆ -ಪ್ರಕರಣ ದಾಖಲು

0

ವಿಟ್ಲ: ಪರವಾನಿಗೆಯ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕೋಟೆತ್ತಡ್ಕ ಎಂಬಲ್ಲಿ ನಡೆದಿದೆ. ಈ ಸಂಬಂಧ ಬಂಟ್ವಾಳ ತಾಲೂಕು ಮೇರಮಜಲು ನಿವಾಸಿ ರಂಜಿತ್ ಕುಮಾರ್ ಎಂಬಾತನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.


ಪರವಾನಿಗೆ ಅವಧಿ ಮುಗಿದರೂ ಗಣಿಗಾರಿಕೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ವಿಟ್ಲ ಪೊಲೀಸರಿಗೆ ಲಭಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಎಸ್.ಐ. ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಗಣಿಗಾರಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಪರಿಶೀಲಿಸಿದಾಗ, ಕೆಂಪುಕಲ್ಲು ಗಣಿಗಾರಿಕೆ ಪರವಾನಿಗೆಯ ಅವಧಿ 29-04-2026 ರಂದು ಅಂತ್ಯಗೊಂಡಿರುವುದು ದೃಢಪಟ್ಟಿತ್ತು. ಆದರೆ, ಪರವಾನಿಗೆ ಪತ್ರದಲ್ಲಿದ್ದ ದಿನಾಂಕವನ್ನು 29-05-2026 ಎಂದು ತಿದ್ದುಪಡಿ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಂಜಿತ್ ಕುಮಾರ್ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here