







12 ಕೋಟಿ ರೂ ವೆಚ್ಚದ ನೂತನ ಸಮುದಾಯ ಕೇಂದ್ರ ಶೀಘ್ರದಲ್ಲೇ ಲೋಕಾರ್ಪಣೆ: ಶಾಸಕ ಅಶೋಕ್ ರೈ
ಪುತ್ತೂರು: ಗಡಿನಾಡ ಗ್ರಾಮವಾದ ಪಾಣಾಜೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ರಾಜ್ಯ ಸರಕಾರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದ್ದು 12 ಕೋಟಿ ರೂ. ವೆಚ್ಚದಲ್ಲಿ ನೂತನ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿದ್ದು, ಇದರ ಲೋಕಾರ್ಪಣೆ ಶೀಘ್ರವೇ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಶನಿವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ನೂತನ ಸಮುದಾಯ ಕೇಂದ್ರದ ಕಟ್ಟಡ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಬಳಿಕ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ.




ಗಡಿಗ್ರಾಮದಲ್ಲಿ ಇಂಥಹದೊಂದು ಸುಸಜ್ಜಿತ ಸಮುದಾಯ ಕೇಂದ್ರದ ಅಗತ್ಯವಿದೆ ಎಂಬುದನ್ನು ಮನಗಂಡ ಸರಕಾರ ಆಧುನಿಕ ಸೌಲಭ್ಯಗಳನ್ನೊಳಗೊಂಡ ಕಟ್ಟಡವನ್ನು ನಿರ್ಮಾಣ ಮಾಡಿದೆ. ಪಾಣಾಜೆಯಲ್ಲಿ ಯಾವುದೇ ಕ್ಲಿನಿಕ್ ಕೂಡಾ ಇಲ್ಲದೇ ಇರುವುದು ಜನರಿಗೆ ತುಂಬಾ ತೊಂದರೆಯಾಗಿರುವುದನ್ನು ಮನಗಂಡ ಸರಕಾರ, ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿದೆ. ನೂತನ ಸಮುದಾಯ ಕೇಂದ್ರದಲ್ಲಿ 30 ಬೆಡ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಹೇಳಿದರು.
ಕಾಮಗಾರಿ ತಡವಾದ್ದರಿಂದ ಉದ್ಘಾಟನೆ ತಡವಾಗಿದೆ
ಈ ಸಮುದಾಯ ಆರೋಗ್ಯ ಕೇಂದ್ರವನ್ನು ಒಂದು ವರ್ಷದ ಹಿಂದೆಯೇ ಲೋಕಾರ್ಪಣೆಯಾಗಬೇಕಿತ್ತು ಆದರೆ ಕಾಮಗಾರಿ ಅಪೂರ್ಣವಾದ ಕಾರಣ ಮತ್ತು ಅರಣ್ಯ ಇಲಾಖೆಯಿಂದ ಎನ್ ಒಸಿ ಸಿಗುವಲ್ಲಿ ತಡವಾಗಿದೆ. ಇನ್ನೂ ಕೂಡಾ ಚಿಕ್ಕ ಚಿಕ್ಕ ಕೆಲಸಗಳು ಬಾಕಿ ಇದೆ ಅದು ಎರಡು ತಿಂಗಳಲ್ಲಿ ಪೂರ್ಣವಾಗಲಿದೆ. ಮೇಲ್ಬಾಗದಲ್ಲಿ ಶೀಟ್ ಹಾಕುವ ಕಾಮಗಾರಿ ಬಾಕಿ ಇದ್ದು, ಅದರ ಕಾಮಗಾರಿ ಶೀಘ್ರ ಪೂರ್ಣವಾಗಲಿದೆ.

ಪುತ್ತೂರು ತಾಲೂಕಿಗೆ ಎರಡು ಎಂಡೋ ಸಲ್ಫಾನ್ ಕೇಂದ್ರ
ಪುತ್ತೂರು ತಾಲೂಕಿಗೆ ಸಂಬಂದಪಟ್ಟಂತೆ ಕೊಯಿಲ ಮತ್ತು ಪಾಣಾಜೆಯಲ್ಲಿ ಎಂಡೋ ಪೀಡಿಒತರ ಚಿಕಿತ್ಸಾ ಕೇಂದ್ರವನ್ನು ಸರಕಾರ ಮಂಜೂರು ಮಾಡಿದೆ. ಒಂದು ಎಂಡೋ ಚಿಕಿತ್ಸದಾ ಕೇಂದ್ರಕ್ಕೆ ತಿಂಗಳಿಗೆ 4 ರಿಂದ 5 ಲಕ್ಷ ಆರ್ಥಿಕ ನೆರವನ್ನು ಸರಕಾರ ಭರಿಸುತ್ತದೆ. ಎಂಢೋ ಪೀಡಿತರ ಫಿಸಿಯೋಥೆರಫಿ ಚಿಕಿತ್ಸೆಯೂ ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭವಾಗಲಿದೆ. ಸಾರ್ವಜನಿಕರು ಈ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶಾಸಕರು ಮನವಿ ಮಾಡಿದರು.
24/7 ಆರೋಗ್ಯ ಸೇವೆ
ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ದಿನದ 24 ಗಂಠೆಯೂ ಆರೋಗ್ಯ ಸೇವೆ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಸರಕಾರ 7 ಮಂದಿ ಡಿಗ್ರೂಪ್ ನೌಕರರು,7 ಮಂದಿ ದಾದಿಯರು, ಹಾಗೂ 7 ಮಂದಿ ಸಿಬಂದಿಗಳ ನೇಮಕಕ್ಕೆ ಅನುಮತಿಯನ್ನು ನೀಡಿದೆ. ಜೊತೆಗೆ 5 ಮಂದಿ ವೈದ್ಯರ ನೇಮಕಾತಿಗೂ ಸರಕಾರ ಅನುಮತಿ ನೀಡಿದೆ. ಪ್ರಸೂತಿ ತಜ್ಞರು, ಅನಸ್ತೇಶಿಯಾ ಸೇರಿದಂತೆ 5 ವಿವಿಧ ವೈದ್ಯರುಗಳ ಸೇವೆಯನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಪಾಣಾಜೆಯಲ್ಲಿ 180 ಎಂಡೋ ಪೀಡಿತರು
ಪಾಣಾಜೆ ಗ್ರಾಮದಲ್ಲಿ 180 ಎಂಡೋ ಪೀಡಿತರಿದ್ದಾರೆ ಇವರ ಪ್ಯಕಿ 9 ಮಂದಿ ಮಲಗಿದ್ದಲ್ಲೇ ಇದ್ದಾರೆ ಇಂಥವರ ಆರೋಗ್ಯ ಸೇವೆ ನೀಡಲು ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ ಸಣ್ಣ ಪುಟ್ಟ ಕಾಯಿಲೆಗಳಿಗೂ ಚಿಕಿತ್ಸೆ ನೀಡುವ ವೈದ್ಯರ ತಂಡ ಇಲ್ಲಿ ಕಾರ್ಯಾಚರಿಸಲಿದೆ ಎಂದು ತಿಳಿಸಿದರು.
ಲಿಪ್ಟ್ಗೆ ಅನುದಾನ
ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಿಫ್ಟ್ ವ್ಯವಸ್ಥೆ ಇಲ್ಲದೇ ಇದ್ದು ಇದಕ್ಕಾಗಿ ಅನುದಾನವನ್ನು ಮೀಸಲಿಡಲಿದ್ದು , ವೈದ್ಯಕೀಯ ಪರಿಕರಗಳನ್ನು ಖರೀದಿಗೆ ೮೨ ಲಕ್ಷ ಅನುದಾನದ ಬೇಡಿಕೆ ಇದ್ದು ಅದನ್ನು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು. ಸಿಬ್ಬಂದಿಗಳಿಗೆ ಉಳಿದುಕೊಳ್ಳಲು ವಸತಿ ಕಟ್ಟಡದ ನಿರ್ಮಾಣ ಆಗಬೇಕಿದ್ದು ವರದಿ ಸಿದ್ದಪಡಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಶಾಸಕರು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಮ್ಮಯ್ಯ, ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ, ಡಾ. ವೇದಾವತಿ, ಡಾ. ಸುಧಾಕರ್ , ಸಮಿತಿ ಸದಸ್ಯರಾದ ವಿಶ್ವನಾಥ ರೈ, ಸದಾನಂದ ನಾಯ್ಕ ಭರಣ್ಯ, ವಿಮಲಾ , ಅಬೂಬಕ್ಕರ್ ಆರ್ಲಪದವು, ಶ್ರೀಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು.










