






ಕುಂಬ್ರಕ್ಕೆ ಮತ್ತೊಂದು ಗರಿಮೆ: ದುರ್ಗಾಪ್ರಸಾದ್ ರೈ ಕುಂಬ್ರ


ಪುತ್ತೂರು: ದಿನದಿಂದ ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಮತ್ತೊಂದು ಗರಿಮೆ ಸೇರಿಕೊಂಡಿದೆ ಅದುವೇ ವಿಶ್ವ ಕಾಂಪ್ಲೆಕ್ಸ್, ಕುಂಬ್ರ ಪೇಟೆಯಿಂದ ತುಸು ದೂರದಲ್ಲಿ ಎಲ್ಲಾ ಸೌಕರ್ಯಗಳಿರುವ ಈ ಕಾಂಪ್ಲೆಕ್ಸ್ ವ್ಯಾಪಾರಸ್ಥರಿಗೆ ಒಂದು ಒಳ್ಳೆಯ ಕಾಂಪ್ಲೆಕ್ಸ್ ಆಗಿದೆ ಎಂದು ನ್ಯಾಯವಾದಿ, ಕರ್ನಾಟಕ ತುಳು ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.




ಅವರು ಮೇ.18 ರಂದು ಕುಂಬ್ರ-ತಿಂಗಳಾಡಿ ರಸ್ತೆಯಲ್ಲಿ ಕುಂಬ್ರ ಜಂಕ್ಷನ್ನಿಂದ ಐನ್ನೂರು ಮೀಟರ್ ದೂರದಲ್ಲಿ ಕುರಿಕ್ಕಾರ ಎಂಬಲ್ಲಿ ವಿಶ್ವ ಕಾಂಪ್ಲೆಕ್ಸ್ ಅನ್ನು ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಪುರೋಹಿತರಾದ ರವಿಕುಮಾರ್ ಸನ್ಯಾಸಿಗುಡ್ಡೆಯವರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಪ್ರಗತಿಪರ ಕೃಷಿಕ ಬೈಂಕಿ ರೈ ಅಡ್ಯೇತ್ತಿಮಾರುರವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಸುದ್ದಿಬಿಡುಗಡೆ ಪತ್ರಿಕೆಯ ಮಂಜುನಾಥ ರೈ ನಂಜೆ, ಕೃಷಿಕ ಗಂಗಾಧರ ರೈ ನಂಜೆ, ಬಾಲಕೃಷ್ಣ ರೈ ಕುಂಬ್ರ, ಪ್ರಶಾಂತ್ ರೈ ಕುದ್ಕಾಡಿ, ಸಂಜೀವ ರೈ ಅಂಕೊತ್ತಿಮಾರು, ಜಯರಾಮ ರೈ ಕುರಿಕ್ಕಾರ, ಶೀನಪ್ಪ ಪೂಜಾರಿ ಈಶ ವುಡ್ ವರ್ಕ್ಸ್, ರಕ್ಷಾ ರೈ ಕುದ್ಕಾಡಿ, ಸರ್ವಾಣಿ ರೈ ಕುದ್ಕಾಡಿ, ವಿವೇಕಾನಂದ ಶೆಟ್ಟಿ, ಕಿಶಾನ್ ರೈ ನಂಜೆ, ವಿಶ್ವನಾಥ ರೈ ಕೋಡಿಬೈಲು, ಲೀಲಾವತಿ ರೈ ಕುಂಬ್ರ, ಕವಿಷ್ಮಾ ಶೆಟ್ಟಿ ಕುದ್ಕಾಡಿ, ಪ್ರಾಪ್ತಿ ಶೆಟ್ಟಿ ಕುದ್ಕಾಡಿ, ಗಾಯನ ರೈ ಪುತ್ತಿಗೆಬೈಲು, ಕವೀಶ್ ರೈ, ಶಂಪಾವತಿ ರೈ ಕುರಿಕ್ಕಾರ, ಗಾನ್ವಿ ರೈ ಕುರಿಕ್ಕಾರ, ಜಯಪ್ರಕಾಶ್ ಕೋರಿಕ್ಕಾರ್, ಕುಸುಮಾ ರೈ ಕುರಿಕ್ಕಾರ, ಹರಿಣಿ ಶೆಟ್ಟಿ ಕುರಿಕ್ಕಾರ, ಅವಿಷ್ಮಾ ಶೆಟ್ಟಿ ಕುರಿಕ್ಕಾರ, ರಾಜ್ಮೋಹನ್ ರೈ ಕೊಲ್ಲಾಜೆ, ಅರುಣ ರೈ ಬಿಜಳ ಸೇರಿದಂತೆ ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಗಣ್ಯರು, ಹಿತೈಷಿಗಳು, ಕುಟುಂಬಸ್ಥರು ಆಗಮಿಸಿ ಶುಭ ಹಾರೈಸಿದರು. ವಿಶ್ವ ಕಾಂಪ್ಲೆಕ್ಸ್ ಮಾಲಕ ಸುರೇಶ್ ರೈ ಕುರಿಕ್ಕಾರ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು. ನಳಿನಿ ಎಸ್.ರೈ, ಸುಭಾಷ್ ರೈ ಕುರಿಕ್ಕಾರ, ಅಶ್ವಿನಿ ಎಸ್. ರೈ ನಂಜೆ ಸಹಕರಿಸಿದ್ದರು.

ಕುಂಬ್ರ ಪೇಟೆಯಿಂದ ತಿಂಗಳಾಡಿ ರಸ್ತೆಯಲ್ಲಿ ಐನ್ನೂರು ಮೀಟರ್ ದೂರದಲ್ಲಿದೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳಿರುವ ಕಾಂಪ್ಲೆಕ್ಸ್ ಇದಾಗಿದೆ.ಹೆಚ್ಚಿನ ಮಾಹಿತಿಗಾಗಿ 9632843281 ಗೆ ಸಂಪರ್ಕಿಸಬಹುದಾಗಿದೆ.










