






ಬೆಟ್ಟಂಪಾಡಿ: ವರ್ಷದಲ್ಲಿ ಎರಡು ಬಾರಿ ಜಾತ್ರೋತ್ಸವ ನಡೆಯುವ ಸೀಮೆಯ ವಿಶೇಷ ದೇವಾಲಯವಾದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪತ್ತನಾಜೆ ಜಾತ್ರೋತ್ಸವ ಮೇ 25 ರಂದು ನಡೆಯಲಿದ್ದು, ಅದರ ಅಂಗವಾಗಿ ಗೊನೆಮುಹೂರ್ತ ಕಾರ್ಯಕ್ರಮ ಮೇ.18 ರಂದು ನಡೆಯಿತು.


ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು ಉಪಸ್ಥಿತರಿದ್ದರು. ಅರ್ಚಕ ನಾರಾಯಣ ಭಟ್ ಪ್ರಾರ್ಥಿಸಿದರು. ವೇ.ಮೂ. ಸುಬ್ರಹ್ಮಣ್ಯ ಭಟ್ ತಲೆಪ್ಪಾಡಿ ಗೊನೆ ಮಹೂರ್ತ ನೆರವೇರಿಸಿದರು. ಕ್ಲರ್ಕ್ ವಿನಯ ಕುಮಾರ್ ಸಹಕರಿಸಿದರು.




ವರ್ಷದ ಮೊದಲ ಮತ್ತು ಕೊನೆಯ ಜಾತ್ರೋತ್ಸವವೂ ಬೆಟ್ಟಂಪಾಡಿ ದೇವಾಲಯದಲ್ಲಿ ನಡೆಯುವುದು ಇಲ್ಲಿನ ವಿಶೇಷತೆಯಾಗಿದೆ. ಪತ್ತನಾಜೆ ಜಾತ್ರೆಯ ಶುಭದಿನದಂದು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ಹಾಗೂ ‘ಶ್ರೀಕೃಷ್ಣ ಪರಂಧಾಮ’ ಯಕ್ಷಗಾನ ಬಯಲಾಟ ನಡೆಯಲಿದೆ.










