ಸವಣೂರು: ಬಿಲ್ಲವ ಗ್ರಾಮ ಸಮಿತಿ, ಮಹಿಳಾ ವೇದಿಕೆ ಮಹಾಸಭೆ, ಅಭಿನಂದನಾ ಸಮಾರಂಭ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಬಿಲ್ಲವ ಗ್ರಾಮ ಸಮಿತಿ ಸವಣೂರು ಹಾಗೂ ಬಿಲ್ಲವ ಮಹಿಳಾ ವೇದಿಕೆ ಸವಣೂರು ಇದರ ವಾರ್ಷಿಕ ಮಹಾಸಭೆ ಹಾಗೂ ಉಚಿತ ಪುಸ್ತಕ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಮೇ.17ರಂದು ಸವಣೂರು ಯುವ ಸಭಾ ಭವನದಲ್ಲಿ ನಡೆಯಿತು.

ಪುತ್ತೂರು ತಾಲೂಕು ಬಿಲ್ಲವ ಸಂಘ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಿ, ಸಂದಭೋರ್ಚಿತವಾಗಿ ಮಾತನಾಡಿದರು.

ಅತಿಥಿಗಳಾದ ಶೀನಪ್ಪ ಪೂಜಾರಿ ದೇವಸ್ಯ ಸಹಾಯಕ ಪೊಲೀಸ್ ಉಪನಿರೀಕ್ಷಕರು CCB ಮಂಗಳೂರು ಪುತ್ತೂರು, ತಾಲೂಕು ಬಿಲ್ಲವ ಸಂಘ ಉಪಾಧ್ಯಕ್ಷ ಚಿದಾನಂದ ಸುವರ್ಣ, ಕೋಶಾಧಿಕಾರಿ ಜನಾರ್ದನ ಪದಡ್ಕ, ಮಹಿಳಾ ವೇದಿಕೆ ಅಧ್ಯಕ್ಷೆ ಪುಷ್ಪಾವತಿ ಆನಂದ ಕೇಕುಡೆ, ವಲಯ ಸಂಚಾಲಕ ಸಂತೋಷ್ ಮರಕ್ಕಡ ಉಪಸ್ಥಿತರಿದ್ದರು.

ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ಅಕ್ಷಯ್.ಎ. ಸ್ವಾಗತಿಸಿ, ಕಾರ್ಯದರ್ಶಿ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು.85% ಮೇಲ್ಪಟ್ಟು ಅಂಕಗಳಿಸಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ, ಹಾಗು ಪದವಿಯಾಗಿರುವ ವಿದ್ಯಾರ್ಥಿಗಳನ್ನು ಅಭಿನಂದನೆ ಸಲ್ಲಿಸಲಾಯಿತು, ಹಾಗೂ 23 ವರ್ಷದಿಂದ ಸವಣೂರು ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದ ಬಾಲಕೃಷ್ಣ ಪೂಜಾರಿ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ಮತ್ತು 32 ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಗ್ರಾಮ ಸಮಿತಿ ಸದಸ್ಯರೆಲ್ಲರೂ ಭಾಗವಹಿಸಿದ್ದರು. ರಕ್ಷಾ ಸುಣ್ಣಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here