ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ, ಎಳ್ಳೆಣ್ಣೆ ಅಭಿಷೇಕ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ ಆರ್ದ್ರಾ ನಕ್ಷತ್ರದಂದು ನಡೆಯುವ ಮೃತ್ಯುಂಜಯ ಹೋಮ ಮತ್ತು ಶುದ್ದ ಎಳ್ಳೆಣ್ಣೆ ಅಭಿಷೇಕವು ಮೇ.20ರಂದು ನಡೆಯಿತು.


ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ನೇತೃತ್ವದಲ್ಲಿ ಮೃತ್ಯುಂಜಯ ಹೋಮ‌ ನಡೆಯಿತು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ನಳಿನಿ ಪಿ ಶೆಟ್ಟಿ, ಸುಭಾಷ್ ರೈ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

60 ಲೀಟರ್ ಎಳ್ಳೆಣ್ಣೆ ಅಭಿಷೇಕ
ಭಕ್ತರು ಒಂದು ತಿಂಗಳಲ್ಲಿ ಸಮರ್ಪಣೆ ಮಾಡಿದ ಎಳ್ಳೆಣ್ಣೆ ಸುಮಾರು 60 ಲೀಟರ್ ಶೇಖರಣೆಗೊಂಡಿತ್ತು. ಈ ಎಣ್ಣೆಯನ್ನು ದೇವರಿಗೆ ಅಭಿಷೇಕ ಮಾಡಲಾಯಿತು. ಅಭಿಷೇಕ ಎಣ್ಣೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here