ಮೇ.27ರಂದು ವಿವಿಯಲ್ಲಿ “ಆನು ಒಲಿದಂತೆ ಹಾಡುವೆ” – ಪ್ರೊ. ಬಿ.ಎ. ವಿವೇಕ ರೈ ಸಮಗ್ರ ಸಾಹಿತ್ಯ ಅವಲೋಕನ

0

ಪುತ್ತೂರು: ಹಿರಿಯ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಅವರ ಸಮಗ್ರ ಸಾಹಿತ್ಯ ಅವಲೋಕನ ಹಾಗೂ ಸಂವಾದ ಕಾರ್ಯಕ್ರಮ “ಆನು ಒಲಿದಂತೆ ಹಾಡುವೆ” ಸರಣಿಯ 5ನೇ ಕಾರ್ಯಕ್ರಮವು ಮೇ.27ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯಲಿದೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಮಂಗಳೂರು ವಿವಿಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ, ಬೆಂಗಳೂರಿನ ಅಭಿನವ ಹಾಗೂ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ವೇದಿಕೆ “ಗಿಳಿವಿಂಡು” ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಬುಧವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿವಿಯ ಕನ್ನಡ ವಿಭಾಗದ ಪ್ರೊ. ಬಿ.ಎ. ವಿವೇಕ ರೈ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಹಂಪಿ ಕನ್ನಡ ವಿವಿ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ, ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪಗೌಡ, ಹಂಪಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ವೆಂಕಟಗಿರಿ ದಳವಾಯಿ, ಅಭಿನವದ ರವಿಕುಮಾರ್ ಹಾಗೂ ಗಿಳಿವಿಂಡು ವೇದಿಕೆ ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ ಭಾಗವಹಿಸಲಿದ್ದಾರೆ.ಬಳಿಕ ನಡೆಯುವ “ಪ್ರೊ. ಬಿ.ಎ. ವಿವೇಕ ರೈ ಅವರ ಸಮಗ್ರ ಸಾಹಿತ್ಯ ಅವಲೋಕನ” ಗೋಷ್ಠಿಯಲ್ಲಿ ಪ್ರೊ. ವಿಜಯ ಪೂಣಚ್ಚ, ಡಾ. ರೇಖಾ ಬನ್ನಾಡಿ ಹಾಗೂ ಡಾ. ಆರ್. ಸತೀಶ್ ವಿಚಾರ ಮಂಡಿಸಲಿದ್ದಾರೆ.ಅಪರಾಹ್ನ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಪ್ರೊ. ಕೆ. ಚಿನ್ನಪ್ಪಗೌಡ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ.

ಡಾ. ತಾಳ್ತಜೆ ವಸಂತಕುಮಾರ್, ಡಾ. ಅಭಯಕುಮಾರ್, ಡಾ. ನರಸಿಂಹಮೂರ್ತಿ, ಡಾ. ಇಂದಿರಾ ಹೆಗಡೆ, ರಾಜಶೇಖರ ಹಳೆಮನೆ, ಡಾ. ಚೇತನ್ ಸೋಮೇಶ್ವರ, ಪ್ರೊ. ಸೋಮಣ್ಣ ಹೊಂಗಳ್ಳಿ, ಡಾ. ಸಂಪತ್ ಕುಮಾರ್, ನಾಗರಾಜ್ ಹೆಗಡೆ ಅಪಗಾಲ, ಶಶಿರಾಜ್ ಕಾವೂರು ಹಾಗೂ ಚಂದ್ರಕಲಾ ನಂದಾವರ ಭಾಗವಹಿಸಲಿದ್ದಾರೆ.ಸಾಹಿತ್ಯಾಸಕ್ತರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here