






ಬಡಗನ್ನೂರು: ನರಿಮೊಗ್ರು ನವೋದಯ ಸ್ವ ಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ ನರಿಮೊಗ್ರು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮೇ.24ರಂದು ನಡೆಯಿತು.



ಅಂಬಿಕಾ ಸ್ವ ಸಹಾಯ ನಂಘ ಪಾಣಂಬು ಶಾಂತಿಗೋಡು ಇದರ ಸದಸ್ಯರಿಗೆ 1,16,000, ಮಂಜುಶ್ರೀ ಸ್ವ ಸಹಾಯ ಸಂಘ ಮರಕೂರು ಇದರ ಸದಸ್ಯರಿಗೆ 1,39,125 ಹಾಗೂ ಗಣಪತಿ ಸ್ಪ ಸಹಾಯ ನಂಘ ಬಜ್ಪಳ್ಳ ನರಿಮೊಗ್ರು ಇದರ ಸದಸ್ಯರರಿಗೆ 85,413 ರೂ. ಒಟ್ಟು 220,358 ಲಾಭಾಂಶವನ್ನು ನರಿಮೊಗ್ರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಡಿ, ಉಪಾಧ್ಯಕ್ಷೆ ಪವಿತ್ರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಧುಕರ ಹೆಚ್, ಹಾಗೂ ನವೋದಯ ಒಕ್ಕೂಟದ ತಾಲೂಕು ಮೇಲ್ವಿಚಾರಕ ಹರೀಶ್ ಕುಲಾಲ್ ವಿತರಣೆ ಮಾಡಿದರು.



ಕಾರ್ಯಕ್ರಮದಲ್ಲಿ ನರಿಮೊಗ್ರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪರಮೇಶ್ವರ ಭಂಡಾರಿ, ವಿ. ಬಾಬು ಶೆಟ್ಟಿ ವೀರಮಂಗಲ ವಿಶ್ವನಾಥ ಬಲ್ಯಾಯ ಯಂ, ಕೆ. ಪ್ರವೀಣ್ ಕುಮಾರ್ ಶೆಟ್ಟಿ ನಮಿತ, ಜಯರಾಮ ಪೂಜಾರಿ ಒತ್ತೆಮುಂಡೂರು, ದೇವಪ್ಪ ಗೌಡ ಓಲಾಡಿ, ದೇವಪ್ಪ ಪಜಿರೋಡಿ, ಶಿವಪ್ರಸಾದ್ ನಾಯ್ಕ, ಚಂದ್ರ ಯಂ. ಮಣಿಯ, ಪ್ರೇರಕಿ ಕುಸುಮಾವತಿ ಹಾಗೂ ನವೋದಯ ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.









