







ಪುತ್ತೂರು: ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ದುರ್ಗಾಪೂಜೆ, ರಂಗಪೂಜೆ ಹಾಗೂ ಭಜನಾ ಕಾರ್ಯಕ್ರಮ ಮೇ 23 ರಂದು ನೆರವೇರಿದ್ದು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿರವರು ಆಗಮಿಸಿ ಶುಭ ಹಾರೈಸಿದರು.


ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿರವರಿಗೆ ಶ್ರೀಮತಿ ಸುಮಿತ್ರಾ ವಿಶ್ವಜಿತ್ ಅಮ್ಮುಂಜರವರು ಶಾಲು ಹೊದಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಮಾಜಿ ಸದಸ್ಯ ರೇಖನಾಥ್ ರೈ ದಂಪತಿ, ಸದಸ್ಯರಾದ ನಳಿನಾಕ್ಷಿ, ಪ್ರಮುಖರಾದ ಜಯರಾಂ ಹೆಗ್ಡೆ, ಸುಜಾತಾ ರೈ ಸಂಪ್ಯದಮೂಲೆ, ಮಾಲಿನಿ ಹೆಗ್ಡೆ, ಕಲ್ಲೇಗ ಕಲ್ಕುಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರತೀಕಾ ಪೂರ್ಣೇಶ್ ಸಹಿತ ಹಲವರು ಉಪಸ್ಥಿತರಿದ್ದರು.













