ಪಾಣಾಜೆ ಬಿಜೆಪಿ ಶಕ್ತಿಕೇಂದ್ರ ಸಭೆ – ಗಣಪತಿ ಬಲ್ಯಾಯ ನೂತನ ಪ್ರಮುಖ್ ಆಗಿ ಆಯ್ಕೆ

0

ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಪಾಣಾಜೆ ಶಕ್ತಿಕೇಂದ್ರದ ಸಭೆಯು ಮೇ 23ರಂದು ಪಾಣಾಜೆಯ ಶಂಕರನಾರಾಯಣ ಭಟ್ ಅವರ ಮನೆಯಲ್ಲಿ ನಡೆಯಿತು.

ಹಿಂದಿನ ಶಕ್ತಿಕೇಂದ್ರದ ಚಟುವಟಿಕೆ ಶಿಷ್ಟಾಚಾರ ಬದ್ಧವಾಗಿ ನಡೆದ ಹಿನ್ನೆಲೆಯಲ್ಲಿ ನೂತನ ಶಕ್ತಿಕೇಂದ್ರ ಪ್ರಮುಖ್ ಆಗಿ ಗಣಪತಿ ಬಲ್ಯಾಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜ್ರುಮಾರ್, ನಿಕಟಪೂರ್ವ ಶಾಸಕ ಸಂಜೀವ ಮಠಂದೂರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ದಡ್ಡು, ಲೋಕೇಶ್ ಚಾಕೋಟೆ, ಉಪಾಧ್ಯಕ್ಷ ವಿದ್ಯಾಧರ್ ಜೈನ್, ರೈತ ಮೋರ್ಚಾ ಅಧ್ಯಕ್ಷ ಶರತ್ ನಿಡ್ವಣ್ಣಾಯ, ರವೀಂದ್ರ ಭಂಡಾರಿ ಹಾಗೂ ಶಕ್ತಿಕೇಂದ್ರದ ಪ್ರಮುಖರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here