






ಪುತ್ತೂರು: ಪೆರಾಜೆ ಗ್ರಾಮದ ಕುಪ್ಪೆಪದವು ಎಂಬಲ್ಲಿ ಜೆಸಿಬಿ ಕೆಲಸದ ವೇಳೆ ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿದ್ದ 26 ನಾಗರಹಾವಿನ ಮರಿಗಳು ಮತ್ತು ಹೆಬ್ಬಾವಿನ ಮೊಟ್ಟೆಗಳನ್ನು ರಕ್ಷಣೆ ಮಾಡಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.


ಕುಪ್ಪೆಪದವಿನಲ್ಲಿ ಜೆಸಿಬಿಯಲ್ಲಿ ಮಣ್ಣಿನ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವೊಂದು ಮಣ್ಣಿನಡಿಯಲ್ಲಿ ಮುಚ್ಚಿ ಹೊರಬಾರಲಾರದೆ ಸತ್ತು ಹೋಗಿತ್ತು. ಈ ಕುರಿತು ಮಾಹಿತಿ ಪಡೆದ ಉರಗತಜ್ಞ ತೇಜಸ್ ಅವರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಸುಮಾರು 26 ನಾಗರಹಾವಿನ ಮರಿಗಳು ಪತ್ತೆಯಾಗಿವೆ. ಇದರ ಜೊತೆಗೆ 50 ಮೀಟರ್ ದೂರದಲ್ಲಿ ಹೆಬ್ಬಾವಿನ ಮೊಟ್ಟೆಗಳು ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿರುವುದು ಬೆಳಕಿಗೆ ಬಂದಿದೆ.ಅವೆಲ್ಲವನ್ನು ಸುರಕ್ಷಿತವಾಗಿ ಹೊರಗೆ ತೆಗೆದು ಕೃತಕ ಕಾವು ನೀಡಿ ಸಂರಕ್ಷಿಸಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ. ಈ ಸಂದರ್ಭ ಆರ್ಎಫ್ಒ ಸುನಿಲ್ ಡಿಸೋಜ, ಡಿವೈಎಫ್ಒ ರವಿ, ಎಫ್ಜಿ ದಯಾನಂದ್, ರಾಘವ ಮತ್ತು ವರ ಮಹತಿ ಅವರ ಉಪಸ್ಥಿತಿಯಲ್ಲಿ ಮರಿಗಳನ್ನು ಅರಣ್ಯಕ್ಕೆ ಬಿಡಲಾಯಿತು.













