







ಬಡಗನ್ನೂರು: ಕುಂಬ್ರ ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಮೇ.26ರಂದು ಕೇಂದ್ರ ಸಹಕಾರಿ ಬ್ಯಾಂಕಿನ ಕುಂಬ್ರ ಶಾಖೆಯಲ್ಲಿ ನಡೆಯಿತು.


ವರಲಕ್ಷ್ಮಿ ಸ್ವಸಹಾಯ ಸಂಘ ಕುರಿಂಜ, ಶ್ರೀ ಮಂಜುನಾಥ ಸ್ವಸಹಾಯ ಸಂಘ ಬಪ್ಪಪುಂಡೇಲು ಹಾಗೂ ಶ್ರೀ ಧೂಮಾವತಿ ಸ್ವಸಹಾಯ ಸಂಘ ಪಾಪೆಮಜಲು ಇದರ ಸದಸ್ಯರಿಗೆ ಒಟ್ಟು ರೂ 1,99,560 ಲಾಭಾಂಶವನ್ನು ಕೇಂದ್ರ ಸಹಕಾರಿ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ರಾಜೇಶ್ ಶೆಟ್ಟಿ ಅವರು ಚೆಕ್ ಮೂಲಕ ವಿತರಿಸಿದರು.



ಈ ಸಂದರ್ಭದಲ್ಲಿ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕ ವಿಶ್ವನಾಥ್ ಹಾಗೂ ಸಿಬ್ಬಂದಿಗಳು ಮತ್ತು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪ್ರೇರಕಿ ಹರಿಣಾಕ್ಷಿ ಡಿ.ಜಿ ಸಹಕರಿಸಿದರು.










