







ಪುತ್ತೂರು: ದಾಂಪತ್ಯ ಜೀವನದ 50 ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಂಡಿರುವ ಸಹಕಾರರತ್ನ ಸವಣೂರು ಸೀತಾರಾಮ ರೈ- ಕಸ್ತೂರಿಕಲಾ ಎಸ್ ರೈ ದಂಪತಿಯನ್ನು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸನ್ಮಾನಿಸಿ, ಗೌರವಿಸಿದರು.


ಮೇ.23 ರಂದು ಸವಣೂರು ಸೀತಾರಾಮ ರೈ ಕಸ್ತೂರಿಕಲಾ ಎಸ್ ರೈ ದಂಪತಿಯನ್ನು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಗೌರವಿಸಿದರು.ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉದ್ಯಮಿ ರಾಜಾರಾಮ್ ಪ್ರಭು ಅಶ್ವಿನಿ ಫಾರ್ಮ್, ಪುತ್ತೂರು ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಪ್ರಭಾಕರ್ ಶೆಟ್ಟಿ ನಡುಬೈಲು, ಕುಶಾಲಪ್ಪ ಗೌಡ ಪೂವಾಜೆ, ಸತೀಶ್ ಬಲ್ಯಾಯ ಕನ್ನಡಕುಮೇರು, ಎಚ್ ಉದಯಕುಮಾರ್ ಪುತ್ತೂರು, ಶಿವರಾಮ್ ಏನೇಕಲ್, ಸೀತಾರಾಮ ರೈ ಅಳಿಯ ಅಶ್ವಿನ್ ಎಲ್ ಶೆಟ್ಟಿ , ಮಕ್ಕಳಾದ ಮಹೇಶ್ ರೈ, ಡಾ.ರಾಜೇಶ್ ರೈ, ರಶ್ಮಿ ಅಶ್ವಿನ್ ಶೆಟ್ಟಿ, ಸೊಸೆಯಂದಿರಾದ ಪಲ್ಲವಿ ಮಹೇಶ್ ರೈ ಮತ್ತು ಅಶ್ವಿತಾ ರಾಜೇಶ್ ರೈ ಉಪಸ್ಥಿತರಿದ್ದರು.













