







ಅರಿಯಡ್ಕ: ಭಾರತೀಯ ಅಂಚೆ ಇಲಾಖೆಯ ದರ್ಬೆ ಪುತ್ತೂರು ಶಾಖೆಯಲ್ಲಿ ಅಂಚೆ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅರಿಯಡ್ಕ ಗ್ರಾಮದ ಕುತ್ಯಾಡಿ ಲಕ್ಷ್ಮಣ ನಾಯ್ಕ ಅವರು ಮೇ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.


ಅರಿಯಡ್ಕ ಗ್ರಾಮದ ಕುತ್ಯಾಡಿ ದಿ.ಮಾನು ನಾಯ್ಕ ಮತ್ತು ದಿ.ನೀಲಮ್ಮ ದಂಪತಿಯ ಪುತ್ರರಾದ ಲಕ್ಷ್ಮಣ ನಾಯ್ಕ ಅವರು 1990ರಲ್ಲಿ ಭಾರತೀಯ ಅಂಚೆ ಇಲಾಖೆಯ ಸುಬ್ರಹ್ಮಣ್ಯ ಶಾಖೆಯಲ್ಲಿ ಗುಮಾಸ್ತರಾಗಿ ಸೇವೆಗೆ ಸೇರಿದ್ದರು. ಆನಂತರದ ದಿನಗಳಲ್ಲಿ ಸುಳ್ಯ, ಪಾಣೆಮಂಗಳೂರು, ಬೆಳ್ಳಾರೆ, ವಿಭಾಗೀಯ ಕಚೇರಿ ಪುತ್ತೂರು ಮುಂತಾದ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿ, ಸುದೀರ್ಘ 35 ವರ್ಷಗಳ ಸೇವೆ ಸಲ್ಲಿಸಿದ ಹಿರಿಮೆ ಇವರದ್ದು. ಪ್ರಸ್ತುತ ಕುತ್ಯಾಡಿಯಲ್ಲಿ ಪತ್ನಿ ಗೀತಾ ಕುಮಾರಿ ಪಿ., ಪುತ್ರಿಯರಾದ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಿಶ್ಮಿತಾ ಕೆ.ಎಲ್. ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿರೀಕ್ಷಾ ಕೆ.ಎಲ್. ಅವರೊಂದಿಗೆ ಜೀವನ ನಡೆಸುತ್ತಿದ್ದಾರೆ.













