ಫರಂಗಿಪೇಟೆ ಮೌಲಾನಾ ಆಝಾದ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಾಲಾ ಪ್ರಾರಂಭೋತ್ಸವ

0

ಪುದು: ಮಾರಿಪಳ್ಳ ಫರಂಗಿಪೇಟೆಯ ಕರ್ನಾಟಕ ಮೌಲಾನಾ ಆಝಾದ್ ಪಬ್ಲಿಕ್ ಸ್ಕೂಲ್‌ನಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಜೂ.1ರಂದು ನಡೆಯಿತು.

ವಿದ್ಯಾರ್ಥಿಗಳ ಜಾಥವನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ವಿಶುಕುಮಾರ್ ಮತ್ತು ಮೊಹಮ್ಮದ್ ಇಕ್ಬಾಲ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಉಮರುಲ್ ಫಾರೂಕ್ ವಹಿಸಿ ಶಿಸ್ತು ಸಂಯಮ ಇದ್ದರೆ ಮಾತ್ರ ಮುಂದೆ ಉತ್ತಮ ವಿದ್ಯಾಭ್ಯಾಸ ಪಡೆಯಲು ಸಾಧ್ಯ ಎಂದು ತಿಳಿಸಿದರು. ನಂತರ ಶಾಲಾ ಪ್ರಾಂಶುಪಾಲರಾದ ಶೋಭಾರವರು ಉತ್ತಮ ಶಿಸ್ತು ಬದ್ಧ ಜೀವನವನ್ನು ನಡೆಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕರೆ ಇತ್ತರು. ಶಿಕ್ಷಕಿ ಎಸ್.ಪಿ. ರಝಿಯ ಪೋಷಕರಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿ ಕವನದ ಮೂಲಕ ಮಕ್ಕಳನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸೀದಿ ಫರಂಗಿಪೇಟೆ ಇಲ್ಲಿಯ ಕೋಶಾಧಿಕಾರಿ ಅಬ್ದುಲ್ ಮಜೀದ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳು ಹಾಗೂ ಮಾಜಿ ಪ್ರಾಂಶುಪಾಲರಾದ ಮೊಹಮ್ಮದ್ ಫಾರೂಕ್ ರವರು ಉಪಸ್ಥಿತರಿದ್ದು ಶುಭ ಹಾರೈಸಿದರು.ಶಾಲಾ ಕಚೇರಿ ಸಹಾಯಕ ಅಬ್ದುಲ್ ಮಜೀದ್, ಶಿಕ್ಷಕರಾದ ಫಾತಿಮತ್ ನಿಧಾ, ಮೈಮುನಾ, ಪ್ರತೀಕ್ಷಾ ಹೆಚ್, ಹಲೀಮತ್ ರಶೀದಾ, ಅಕ್ಷತಾ ಕರ್ಕೇರ, ಭಾಗ್ಯಶ್ರೀ, ಮಿಶ್ರಿಯಾ, ಪೋಷಕರು ಶಿಕ್ಷಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕಿ ರೇಖಾ ಸ್ವಾಗತಿಸಿದರು. ಸಮಾಜ ಶಿಕ್ಷಕಿಯಾದ ಸೌಧ ಎಲ್ಲರನ್ನು ವಂದಿಸಿದರು. ಕನ್ನಡ ಶಿಕ್ಷಕಿಯಾದ ರಾಬಿಯ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಶಾಲೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಜಿನೇಂದ್ರ ಕೋಟ್ಯಾನ್ ರವರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here