







ಪುತ್ತೂರು: ಇಲ್ಲಿನ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಜೂ.1 ರಂದು ಶಾಲಾ ಮಕ್ಕಳ ಸ್ಥಳೀಯ ಜಾಥದ ಮೂಲಕ ನಡೆಯಿತು.


ಶಾಲೆಯ ಸಂಚಾಲಕ ಶೇಖ್ ರಹಮತ್ತುಲ್ಲಾಹ್ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದ ನಿಯಮಗಳು ಮತ್ತು ಶಿಸ್ತು ಪಾಲನೆಯ ಮಹತ್ವವನ್ನು ವಿವರಿಸಿದರು. ಮುಖ್ಯ ಶಿಕ್ಷಕರು ಹೊಸದಾಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.ಶಾಲೆಯ ಎಲ್ಲಾ ಶಿಕ್ಷಕರು ತಮ್ಮ ತಮ್ಮ ತರಗತಿಯ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.













