







ಪುತ್ತೂರು: ಪ್ರತಿಷ್ಠಿತ ಗಾನಸಿರಿ ಕಲಾ ಕೇಂದ್ರದ ಪುತ್ತೂರು ಪ್ರಧಾನ ಶಾಖೆ, ಸುಳ್ಯ, ಕಲ್ಲೇರಿ ,ಬೇರಿಕೆ, ಮಡಂತ್ಯಾರ್ ಮತ್ತು ಆಲಂಕಾರು ಶಾಖೆಗಳಲ್ಲಿ ಸುಗಮ ಸಂಗೀತ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿರುತ್ತದೆ.


ಕಳೆದ 25 ವರ್ಷಗಳಲ್ಲಿ 45,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡಿದ ಕರ್ನಾಟಕದ ಏಕೈಕ ಸುಗಮ ಸಂಗೀತ ಸಂಸ್ಥೆ ಗಾನಸಿರಿಯಲ್ಲಿ
ಆನ್ ಲೈನ್ ತರಗತಿಗಳೂ ಲಭ್ಯವಿದ್ದು, ಕರ್ನಾಟಕದ ಅತಿ ದೊಡ್ಡ ಸುಗಮ ಸಂಗೀತ ಸಂಸ್ಥೆಯ ಸಾರಥಿ ಡಾ. ಕಿರಣ್ ಕುಮಾರ್ ಗಾನಸಿರಿ ಇವರಿಂದ ತರಬೇತಿ ಪಡೆದು ಉತ್ತಮ ಗಾಯಕ ಗಾಯಕಿಯರಾಗುವ ಕನಸು ಉಳ್ಳವರು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.













