







ಕಾಣಿಯೂರು: ಕುದ್ಮಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಜೂ.5ರಂದು ಆಚರಿಸಲಾಯಿತು. ಪರಿಸರ ಸಂರಕ್ಷಣೆಗೆ ನಾಗರಿಕರು ಪಾಲಿಸಲೇಬೇಕಾದ ಏಳು ಕ್ರಮಗಳು ಹಾಗೂ ಪರಿಸರ ಸಂಬಂಧಿ ಮಾಹಿತಿಯನ್ನು ಶಾಲಾ ಮುಖ್ಯಗುರು ಮಿನಿ ವರ್ಗಿಸ್ ತಿಳಿಸಿದರು. ಬಾಳೆವನ ಹಾಗೂ ತರಕಾರಿ ತೋಟವನ್ನು ನಿರ್ಮಾಣ ಮಾಡಿ ತನ್ಮೂಲಕ ಮಗು ದೈನಂದಿನವಾಗಿ ಸಸ್ಯಗಳ ಬಗ್ಗೆ ಕಾಳಜಿ ಹಾಗೂ ಆರೈಕೆಯನ್ನು ಮಾಡುವ ಹವ್ಯಾಸಕ್ಕೆ ಅವಕಾಶ ಕಲ್ಪಿಸಲಾಯಿತು. ನೆಟ್ಟಗಿಡಗಳನ್ನು ಮಗು ಒಂದರಂತೆ ದತ್ತು ತೆಗೆದುಕೊಂಡು ವರ್ಷದ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.



ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ದೇವರಾಜ್ ನೂಜಿ, ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಪೋಷಕವೃಂದದವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಸಹಕರಿಸಿದರು. ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.












