







ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಸಮೃದ್ಧಿ ಇಕೋ ಕ್ಲಬ್ ವತಿಯಿಂದ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.


ಕಾಲೇಜಿನ ಪ್ರಾಂಶುಪಾಲ ಗೋಪಾಲ ಗೌಡ ಅವರು ಗಿಡ ನೆಟ್ಟು ಮಾತನಾಡಿ, “ಅತಿಯಾದ ಪರಿಸರ ವಿನಾಶದಿಂದ ಜಗತ್ತು ಭೀಕರ ಪರಿಸ್ಥಿತಿಯನ್ನು ಎದುರಿಸುವ ಮುನ್ನ ನಾವು ಪರಿಸರದ ಬಗ್ಗೆ ಕಾಳಜಿ ಮತ್ತು ಸೂಕ್ತ ಪರಿಹಾರವನ್ನು ಕಂಡುಕೊಳ್ಳದೆ ಇದ್ದರೆ ಜಾಗತಿಕ ಬಿಕ್ಕಟ್ಟು ಖಚಿತ” ಎಂದು ಎಚ್ಚರಿಸಿದರು.



ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಧರ್ಣಪ್ಪ ಗೌಡ, ಉಮಾಮಹೇಶ್ವರ, ದಯಾನಂದ, ಲತಾ ಕುಮಾರಿ, ಅಬ್ದುಲ್ ರಝಾಕ್, ಸುಪ್ರೀತಾ, ಇಕೋ ಕ್ಲಬ್ ಸದಸ್ಯರಾದ ಪ್ರಜ್ವಲ್, ಕಿಶೋರ್, ಪ್ರಣೀತ್, ಮಂಜುನಾಥ, ಕಿರಣ್ ಕುಮಾರ್, ಮುರಳಿ, ಸಮರ್ಥ, ರಕ್ಷಿತ್, ಹುಸೈನಾರ್, ಭರತ್, ವಚನ್, ಧನ್ ರಾಜ್, ವಂದ್ಯಾ, ಧನ್ಯಶ್ರೀ, ಫಾತಿಮಾ ಬೀಬಿ, ರಕ್ಷಾ, ನಂದಿತಾ, ಪ್ರೀತಿಕಾ, ತುಳಸಿ, ಅನುಶ್ರೀ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.










