ಹಾರಾಡಿ ಸ.ಮಾ.ಉ ಹಿ.ಪ್ರಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಪುತ್ತೂರು: ನಗರದ ಸ. ಮಾ. ಉ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಮಿಷನ್ ಲೈಫ್ ಹಾಗೂ “ಏಕ್ ಪೇಡ್ ಮಾಂ ಕೆ ನಾಮ್” ಅಭಿಯಾನದಡಿ ಜೂ. 5 ರಂದು ಆಚರಿಸಲಾಯಿತು.

ಮಿಷನ್ ಲೈಫ್‌ನ ಆಶಯದಂತೆ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಜೀವನಶೈಲಿಯ ಮಹತ್ವ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. “ಏಕ್ ಪೇಡ್ ಮಾಂ ಕೆ ನಾಮ್” ಅಭಿಯಾನದಡಿ ಸುಮಾರು 30 ಕ್ಕೂ ಹೆಚ್ಚಿನ ಮಕ್ಕಳಿಗೆ ತಾಯಂದಿರ ಹೆಸರಿನಲ್ಲಿ ಮನೆಯಲ್ಲಿ ಗಿಡ ನೆಡಲು ಸಸಿಗಳನ್ನು ವಿತರಿಸಲಾಯಿತು.ವಿದ್ಯಾರ್ಥಿಗಳು ಪರಿಸರ ಜಾಗೃತಿ ಗೀತೆಗಳನ್ನು ಹಾಡಿ, ಪರಿಸರ ಸಂರಕ್ಷಣೆಯ ಕುರಿತು ಭಾಷಣ ಮಾಡಿದರು. ಪರಿಸರ ಜಾಗೃತಿ ಕುರಿತ ಚಿತ್ರಪ್ರದರ್ಶನ ಹಾಗೂ ಕವನ ರಚನೆ ಕಾರ್ಯಕ್ರಮವೂ ನಡೆಯಿತು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಯ ಜಾಗೃತಿ ಜಾಥಾ ನಡೆಯಿತು.

ಘೋಷಣೆಗಳನ್ನು ಕೂಗುತ್ತಾ, ಫಲಕಗಳನ್ನು ಹಿಡಿದು ಹಾದಿಯುದ್ದಕ್ಕೂ ಹಸಿರು ಪರಿಸರದ ಬಗ್ಗೆ ಕಾಳಜಿ ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ಕೆ.ಕೆ ಮಾಸ್ತರ್ ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತು ಮಾತನಾಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಹರಿಪ್ರಸಾದ್ ಗಿಡಗಳನ್ನು ನೆಟ್ಟು ಸಹಕರಿಸಿದರು. ಎಸ್‌ಡಿಎಂಸಿ ಸದಸ್ಯರಾದ ಹರೀಶ್ ಶಾಂತಿ ಹಾಗೂ ಯೋಗಾನಂದ ಸಹಕರಿಸಿದರು. ಶಿಕ್ಷಕರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here