






ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಅಲುಕ್ಕಾಸ್ ವತಿಯಿಂದ ಮುಂಡೂರು ಉನ್ನತಿಕರಿಸಿದ ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.



ಈ ಸಂದರ್ಭದಲ್ಲಿ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯ ವ್ಯವಸ್ಥಾಪಕರಾದ ಹರಿ ಮಾರಾರ್, ಸಿಬ್ಬಂದಿಗಳಾದ ಉದಯ ಕುಲಾಲ್, ಅರ್ಪಿತಾ, ಅಶ್ವಿನಿ, ಶಾಲಾ ಮುಖ್ಯಶಿಕ್ಷಕಿ ವಿಜಯ ಪಿ., ಶಿಕ್ಷಕರಾದ ರಾಮಚಂದ್ರ ಬಿ., ರವೀಂದ್ರ ಶಾಸ್ತ್ರಿ, ಅಬ್ದುಲ್ ಬಶೀರ್, ಶಿಕ್ಷಕಿಯರಾದ ವನಿತಾ ಪಿ., ಮೂಕಂಬಿಕ, ಅನ್ನಪೂರ್ಣ , ಶಕುಂತಳ, ಭಾರತಿ, ಪ್ರೇಮ, ರಕ್ಷಾ ಮೊದಲಾದವರು ಉಪಸ್ಥಿತರಿದ್ದರು. ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯ ವತಿಯಿಂದ ಶಾಲೆಗೆ ಸಸಿ ವಿತರಣೆ ಮಾಡಲಾಯಿತು.













