ಸಿಎ ಪರೀಕ್ಷೆ ಪಾಸಾದ ಮೊಹಮ್ಮದ್ ರಿಯಾಝ್‌ಗೆ ಶಾಸಕರಿಂದ ಸನ್ಮಾನ

0

ಪುತ್ತೂರು: ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂಪ್ಯ ನಿವಾಸಿ ಮೊಹಮ್ಮದ್ ರಿಯಾಝ್ ಅವರನ್ನು ಶಾಸಕ ಅಶೋಕ್ ರೈ ಸನ್ಮಾನಿಸಿ ಗೌರವಿಸಿದರು.

ಶಾಸಕರ ಕಚೇರಿಯಲ್ಲಿ ಸರಳ ಕಾರ್ಯಕ್ರಮ ನಡೆಯಿತು. ಸನ್ಮಾನಿಸಿ ಮಾತನಾಡಿದ ಶಾಸಕರು, “ಸಿಎ ಪರೀಕ್ಷೆ ಪಾಸ್ ಮಾಡುವುದು ಸುಲಭವಲ್ಲ. ಲಕ್ಷದಲ್ಲಿ ಕೆಲವೇ ಸಾವಿರ ಮಂದಿ ಉತ್ತೀರ್ಣರಾಗುವ ಈ ಕಠಿಣ ಪರೀಕ್ಷೆಯಲ್ಲಿ ಆರ್ಯಾಪು ಗ್ರಾಮದ ಸಂಪ್ಯದ ರಿಯಾಝ್ ನಮ್ಮ ಊರಿಗೆ ಕೀರ್ತಿ ತಂದಿದ್ದಾರೆ” ಎಂದರು. “ಸ್ವಂತ ಮನೆಯೂ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿರುವ ರಿಯಾಝ್‌ಗೆ ಉನ್ನತ ವಿದ್ಯೆ ಕಲಿಸಿದ ಅವರ ತಂದೆ-ತಾಯಿ ಸಮಾಜಕ್ಕೆ ಮಾದರಿಯಾಗಿದ್ದಾರೆ” ಎಂದು ಶಾಸಕರು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿದ ರಿಯಾಝ್ ಮಾತನಾಡಿ, “ಪ್ರತಿಭೆಯನ್ನು ಗುರುತಿಸಿ ಶಾಸಕರು ಸನ್ಮಾನಿಸಿದ್ದು ಅತೀವ ಸಂತೋಷ ತಂದಿದೆ. ಈ ರೀತಿಯ ಪ್ರೋತ್ಸಾಹ ಪ್ರತಿಭಾವಂತರಿಗೆ ಇನ್ನಷ್ಟು ಉತ್ತೇಜನ ನೀಡುತ್ತದೆ” ಎಂದರು.

ಮೊಹಮ್ಮದ್ ರಿಯಾಝ್ ಸಂಪ್ಯ ನಿವಾಸಿ ಅಬೂಬಕ್ಕರ್ ಹಾಗೂ ಸಾರಾ ದಂಪತಿಗಳ ಪುತ್ರ. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಸಲಾಂ ಸಂಪ್ಯ, ಹಾರಿಸ್ ಸಂಪ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here