ಕೆಸಿಇಟಿ 2026 ಫಲಿತಾಂಶ ಪ್ರಕಟ : ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಮತ್ತಷ್ಟು ರ್‍ಯಾಂಕ್ ಗಳು

0

ಪುತ್ತೂರು:ಇತ್ತೀಚಿಗೆ ಪ್ರಕಟಗೊಂಡ ವೃತ್ತಿಪರ ಕೋರ್ಸ್‌ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2026ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿದ್ದಾರೆ. ವಿಶಾಲ್ ಪಿ. ಇಂಜಿನಿಯರಿಂಗ್‌ನಲ್ಲಿ ಕೆಸಿಇಟಿಯಲ್ಲಿ 194ನೇ ರ್‍ಯಾಂಕ್ ಪಡೆದು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದಲ್ಲದೇ ಅತ್ಯಧಿಕ ರ್‍ಯಾಂಕ್ ಗಳು ವಿವೇಕಾನಂದ ಪದವಿಪೂರ್ವ ಕಾಲೇಜಿನ ಮುಡಿಗೇರಿದೆ.

ಉತ್ತಮ ಸಾಧನೆ ಮೆರೆದ ಮತ್ತಷ್ಟು ವಿದ್ಯಾರ್ಥಿಗಳ ವಿವರ ಹೀಗಿದೆ. ಸನ್ನಿಧಿ ಕಲ್ಲೂರಾಯ (ಪುತ್ತೂರಿನ ಆರ್ಯಾಪಿನ ರಾಜೇಶ್ ಪಿ. ಹಾಗೂ ಕೃತಿ ಬಿ. ಜಿ. ದಂಪತಿಗಳ ಪುತ್ರಿ) ಬಿ.ಪಿ.ಒ. ದಲ್ಲಿ 606, ವೈಭವಿ ಎಸ್. ಕೆ. (ಬಂಟ್ವಾಳ ತಾಲೂಕಿನ ಕಾರ್ಯಾಡಿಯ ಕೆ. ಸುಂದರ ಹಾಗೂ ಸಿ. ಸುನಿತಾ ದಂಪತಿಗಳ ಪುತ್ರಿ) ಬಿ.ಪಿ.ಟಿ., ಡಿಫಾರ್ಮ , ಬಿ.ಎಸ್ಸಿ. ಎ.ಹೆಚ್.ಸಿ. ಯಲ್ಲಿ ೩3166 ನೇ ರ್‍ಯಾಂಕ್, ಕುಮಾರ್ ಆರ್. (ಮಂಡ್ಯದ ಕೆ. ಆರ್. ಪೇಟೆಯ ಆರ್. ರೂಪೇಶ್ ಹಾಗೂ ರೇಖಾ ದಂಪತಿಗಳ ಪುತ್ರ) ಬಿಪಿಒ ದಲ್ಲಿ 3712 ನೇ ರ್‍ಯಾಂಕ್ ಪಡೆದಿರುತ್ತಾರೆ. 5೦೦೦ದ ಒಳಗೆ ಸುಮಾರು 32 ವಿದ್ಯಾರ್ಥಿಗಳು ರಾಂಕ್ ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here