ಬುರೂಜ್ ಶಾಲಾ ಚುನಾವಣೆ : ನಾಯಕನಾಗಿ ಮೊಹಮ್ಮದ್ ಅಝಾಮ್ ಆಯ್ಕೆ

0

ಪುತ್ತೂರು : ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾಬಾಗಿಲು ಇಲ್ಲಿ ಶೇಖ್ ಜಲಾಲುದ್ದೀನ್ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.

ಭಾರತೀಯ ಸಂವಿಧಾನದಲ್ಲಿ ನಡೆಯುವ ಚುನಾವಣೆ ಪ್ರಕ್ರಿಯೆಯಂತೆ ಮತದಾನ ನಡೆಸಲಾಯಿತು.ಒಂದನೇ ತರಗತಿಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಮತದಾನ ಮಾಡಿದರು .

ಈ ಚುನಾವಣೆಗೆ ಒಂಭತ್ತನೇ ತರಗತಿಯ ವಿದ್ಯಾರ್ಥಿಗಳು ಸ್ಪರ್ಧಿಸಿದ್ದಾರೆ. ಶಾಲಾ ನಾಯಕನಾಗಿ ಮೊಹಮ್ಮದ್ ಅಝಾಮ್, ಉಪ ನಾಯಕಿಯಾಗಿ ಸ್ಪೂರ್ತಿ ಜಾಡರ್, ಸ್ಪೀಕರ್ ಮತ್ತು ಸಾಂಸ್ಕೃತಿಕ ಖಾತ ಸಚಿವೆಯಾಗಿ ಫಾತಿಮತ್ ರಿಷಾನ, ಸ್ಕೌಟ್ಸ್ ಲೀಡರ್ ಆಗಿ ಆಸೀಂ ರಿಹಾನ್,ಗೈಡ್ ಲೀಡರ್ ಆಗಿ ಅಫ್ರಾ ರಿಂಷಾ,ಕ್ರೀಡಾ ಖಾತ ಸಚಿವನಾಗಿ ಶಮಿತ್, ನೀರಾವರಿ ಖಾತ ಸಚಿವನಾಗಿ ಪ್ರಥಮ್ ಕೋಟ್ಯಾನ್ ,ಸ್ವಚ್ಚತಾ ಖಾತ ಸಚಿವನಾಗಿ ಧ್ಯಾನ್ ಶೆಟ್ಟಿ, ಶಿಸ್ತು ನಿಯಮ ಪಾಲನಾ ಖಾತಾ ಸಚಿವೆಯಾಗಿ ಪ್ರತೀಕ ಪೂಜಾರಿ,ಆರೋಗ್ಯ ಖಾತ ಸಚಿವರಾಗಿ ವೀಕ್ಷಾ ಜೈನ್ ಆಯ್ಕೆ ಯಾಗಿರುತ್ತಾರೆ.ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್, ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೊ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here