ಶಿವಸದನದಲ್ಲಿ ಭಕ್ತಿ ಸಂಗೀತ ಸಮರ್ಪಣೆ

0

ಪುತ್ತೂರು: ಮುರದ ‘ಶಿವಸದನ’ ಹಿರಿಯ ನಾಗರಿಕರ ಮತ್ತು ವಿಶೇಷ ಚೇತನರ ವಸತಿ ನಿಲಯದ ನಿವಾಸಿಯಾಗಿದ್ದ ದಿವಂಗತ ರುದ್ರಪ್ಪಯ್ಯನವರ ಧರ್ಮಪತ್ನಿ ದೇವಕಿ ಅವರ ಸ್ಮರಣಾರ್ಥವಾಗಿ ಅವರ ಮಕ್ಕಳು ಶಿವಸದನದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿದರು.

ಗಾನ ಲಹರಿ ಮೆಲೋಡಿಸ್ ಕ್ಲಬ್ಬಿನ ಮಾಲಕಿ ಹಾಗೂ ಗಾಯಕಿ ಸರೋಜಾ ರಾವ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ಶಾನಾ ಸೌಂಡ್ಸ್ ಮತ್ತು ಇವೆಂಟ್ಸ್‌ನ ಮಾಲಕ ಸಂತೋಷ್ ಅಂಚನ್, ಮನೋಹರ್ ಕುಮಾರ್ ಮತ್ತು ಗಾಯಕಿ ಚಿತ್ರಾ ಭಾಗವಹಿಸಿ ಭಕ್ತಿ ಗೀತೆಗಳ ಮೂಲಕ ಗೌರವ ನಮನ ಸಲ್ಲಿಸಲಾಯಿತು. ದೇವಕಿ ಅವರ ಪುತ್ರಿ ವೀಣಾ ಕೃಷ್ಣನ ಹಾಡು ಹಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ದೇವಕಿ ಅವರ ಪುತ್ರ, ಪುತ್ರಿಯರು ಮತ್ತು ಅಳಿಯಂದಿರು ದೀಪ ಬೆಳಗಿಸಿ ಸಂಸ್ಥೆಯ ಹಿರಿಮೆಯ ಬಗ್ಗೆ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಟ್ರಸ್ಟಿನ ಕಾರ್ಯದರ್ಶಿ ಕರುಣ್ ಬೆಳ್ಳೆ ದೇವಕಿ ಅವರನ್ನು ಸ್ಮರಿಸಿದರು. ಟ್ರಸ್ಟಿನ ಅಧ್ಯಕ್ಷೆ ಸುಮಂಗಲ ಪ್ರಭಾಕರ್ ಸ್ವಾಗತಿಸಿದರು. ಶಿಕ್ಷಕಿಯರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here