ಅಂತಾರಾಷ್ಟ್ರೀಯ ಟೆಕ್ನಿವೇಷನ್ ಗರ್ಲ್ಸ್ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಸಾಧನೆ

0

ಪುತ್ತೂರು: ಗೂಗಲ್ (Google) ಮತ್ತು ಎರಿಕ್ಷನ್ (Ericson) ಕಂಪೆನಿಗಳ ಪ್ರಾಯೋಜಕತ್ವದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಈ ವರ್ಷ ನಡೆಸುತ್ತಿರುವ “Technovation Girls” ಎಂಬ ವಿಜ್ಞಾನ ಸಮಾವೇಶದಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿನಿಯರಾದ ಲಾವಣ್ಯ ನಾಯಕ್ (ಮುಂಡೂರು ಲವಕುಮಾರ್ ಹಾಗೂ ನಳಿನಾಕ್ಷಿ ನಾಯಕ್ ರವರ ಪುತ್ರಿ). ದ್ರಿಶಾ ಪಿ (ನರಿಮೊಗರು ಪ್ರಶಾಂತ ಎಂ.ಪಿ ಹಾಗೂ ತ್ರಿವೇಣಿ ಯವರ ಪುತ್ರಿ) ಮತ್ತು ಬೃಂದಾ ಆರ್ ಕೆ (ಕೆಮ್ಮಿಂಜೆ ರಮೇಶ್ ಕೆ ಹಾಗೂ ಶೋಭಾ ಬಿ ಯವರ ಪುತ್ರಿ) ಸೆಮಿಫೈನಲ್‌ಗೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದ Med4U ಎಂಬ ಯೋಜನಾ ವರದಿಯು ರಾಷ್ಟ್ರಮಟ್ಟದಲ್ಲಿ ನಡೆಯುವ ಸೆಮಿಫೈನಲ್ ಹಂತಕ್ಕೆ ಆಯ್ಕೆಯಾಗಿದೆ. ಆಯ್ಕೆಯಾದ ತಂಡದಲ್ಲಿ ಒಟ್ಟು ಐದು ಮಂದಿ ವಿದ್ಯಾರ್ಥಿನಿಯರಿದ್ದು, ಉಳಿದ ಇಬ್ಬರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯರಾಗಿದ್ದಾರೆ.


ವಿದ್ಯಾರ್ಥಿನಿಯರಲ್ಲಿ ಕಂಪ್ಯೂಟರ್, ಡಿಜಿಟಲ್ ತಂತ್ರಜ್ಞಾನ ಹಾಗೂ ಕೌಶಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಗೂಗಲ್ ಮತ್ತು ಎರಿಕ್ಸನ್ ಕಂಪೆನಿಗಳು ಜೊತೆಗೂಡಿ ಪ್ರಪಂಚದಾದ್ಯಂತ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಇವರಿಗೆ ಮೂಲತಃ ಪುತ್ತೂರಿನವರಾಗಿದ್ದ ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಆನಂದವರ್ಧನ್ ರವರು ಒಂದು ವರ್ಷ ತರಬೇತಿ ನೀಡಿ ಜೊತೆಗೆ Optimist Club of Hillsboro ವತಿಯಿಂದ ಉಚಿತವಾಗಿ ಲ್ಯಾಪ್ಟಾಪ್‌ನ್ನು ಕೊಡಿಸುವ ಮೂಲಕ ಯೋಜನಾ ವರದಿಗೆ ಸಹಕರಿಸಿರುತ್ತಾರೆ. ಶ್ರೀ ರಾಮಕೃಷ್ಣ ಫ್ರೌಡ ಶಾಲೆಯ ವಿಶ್ರಾಂತ ವಿಜ್ಞಾನ ಶಿಕ್ಷಕಿ ವಸಂತಿ ಕೆ.. ಸಂಚಾಲಕ ಕಾವು ಹೇಮನಾಥ ಶೆಟ್ಟಿ. ವಿಜ್ಞಾನ ಶಿಕ್ಷಕಿ ಮಾನಸ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್ ಮತ್ತು‌ ಪೋಷಕರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here