ಹಿರಿಯರಿಗೆ ಭದ್ರತೆಯ ಜೀವನ ಕಲ್ಪಿಸುವ ಹೊಸ ಯೋಜನೆ- ಜೂ.21ಕ್ಕೆ ಉಪ್ಪಿನಂಗಡಿಯಲ್ಲಿ ಉಜ್ಜೀವನ ಬಡಾವಣೆ ಲೋಕಾರ್ಪಣೆ

0

ಪುತ್ತೂರು: ನಿರ್ಮಾಣ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ತೊಡಗಿಸಿಕೊಂಡಿರುವ ದ್ವಾರಕಾ ಕಾರ್ಪೋರೇಷನ್ ಪ್ರೈವೇಟ್ ಲಿಮಿಟೆಡ ಪುತ್ತೂರು ಸಂಸ್ಥೆಯಿಂದ ಕಾಲೋಚಿತವಾಗಿ ವಿನೂತನ ಕಲ್ಪನೆಯೊಂದಿಗೆ ಸುಮಾರು 20 ಎಕ್ರೆಯಲ್ಲಿರುವ ನಿರ್ಮಾಣಗೊಂಡಿರುವ ಉಜ್ಜೀವನ ಎಂಬ ಹಿರಿಯ ನಾಗರಿಕರ ಬಡಾವಣೆ ಜೂ.21ರಂದು ಲೋಕಾರ್ಪಣೆಗೊಳ್ಳಲಿದೆ.


ದ್ವಾರಕಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ಪ್ರಸ್ತುತ ಕಾಲದಲ್ಲಿ ಹಿರಿಯ ನಾಗರಿಕರಿಗೆ ಭದ್ರತೆಯ ಜೀವನ ಕಲ್ಪಿಸುವ ಉದ್ದೇಶ, ಹಿರಿಯರು ಮಾತನಾಡುವುದನ್ನು ಕೇಳುವ ಸಮಾನಮನಸ್ಕರ ಅಗತ್ಯವಿದೆ ಎಂಬ ಚಿಂತನೆಯೊಂದಿಗೆ ಇಂತಹ ಬಡಾವಣೆಗಳು ವಿದೇಶದಲ್ಲಿದೆ. ಅದು ಇತ್ತೀಚೆಗೆ ನಮ್ ದೇಶಕ್ಕೂ ಕಾಲಿಟ್ಟಿದೆ. ಕಾಲದ ಅಗತ್ಯಕ್ಕನುಗುಣವಾಗಿ ಬದುಕನ್ನು ತಿದ್ದಿಕೊಳ್ಳಬೇಕಾಗಿರುವುದು ನಾಗರಿಕರಿಗೆ ಅವಶ್ಯವಾಗಿದೆ. ಪ್ರೀತಿಯ ಆರೈಕೆ, ಪೋಷಣೆಗಳಿಗೆ ಬೇಕಾದ ಮಾನವ ಸಂಪನ್ಮೂಲದ ಅಗತ್ಯತೆಯನ್ನು ಮನಗಂಡು ಉಜ್ಜೀವನ ಬಡಾವಣೆಯನ್ನು ನಿರ್ಮಿಸಲಾಗಿದೆ ಎಂದರು.


ದ್ವಾರಕ ಪ್ರತಿಷ್ಟಾನದ ಕಾರ್ಯದರ್ಶಿ ಗಣರಾಜ್ ಕುಂಬ್ಳೆ ಅವರು ಮಾತನಾಡಿ, ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಉಜ್ಜೀವನ ಬಡಾವಣೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸರ್ವ ಸೌಲಭ್ಯಗಳನ್ನು ಒಳಗೊಂಡಿರುವ ದ್ವಾರಕಾ ನೆಸ್ಟ್ ಅನ್ನು ಶಾಸಕ ಅಶೋಕ್ ಕುಮಾರ್ ರೈ ಲೋಕಾರ್ಪಣೆ ಮಾಡಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ದ್ವಾರಕಾ ರಿಫ್ರೇಶ್ಮೆಂಟ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ದ್ವಾರಕಾ ಮಾರ್ಟ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ್, ಬೆಂಗಳೂರು ಭಟ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಶ್ಯಾಮ ಭಟ್, ಸಂಗೀತ ವಿದ್ವಾಂಸ ಕಾಂಚನ ರೋಹಿಣಿ ಸುಬ್ಬರತ್ನಮ್, ಮಕ್ಕಳ ತಜ್ಞ ಡಾ. ಎಂ.ಎನ್. ಭಟ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಉಪ್ಪಂಗಳ, ಬೆಂಗಳೂರಿನ ಉದ್ಯಮಿ ಡಾ. ಹೇಮಂತ್ ರೈ ಮನವಳಿಕೆ, ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಎ.ಬಿ, ಗ್ರಾಮಾಂತರ ಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕಿ ಸ್ವಾತಿ ಎನ್ ಸ್ವಾಮಿ, ಹಿರೇಬಂಡಾಡಿ ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಸದಾನಂದ ಶೆಟ್ಟಿ, ಹಿರೇಬಂಡಾಡಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸತೀಶ್ ಬಂಗೇರ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಗಂಟೆ 6ರಿಂದ ಬೆಂಗಳೂರಿನ ಖ್ಯಾತ ಅಂತರಾಷ್ಟ್ರೀಯ ಗಾಯಕ ರಾಹುಲ್ ವೆಲ್ಲಾಲ್ ಬಳಗದಿಂದ ಭಕ್ತಿಗಾನ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು.


ಬಡಾವಣೆ ಉದ್ಯಮದಲ್ಲಿ ಯಶಸ್ವಿ:

’ನಿಮ್ಮ ಸೈಟ್ / ಮನೆಯ ಕನಸು ನಮ್ಮಲ್ಲಿ ನನಸು’ ಎಂಬ ಘೋಷವಾಕ್ಯದೊಂದಿಗೆ ಗುಣಮಟ್ಟ ಶಾಸ್ತ್ರ ಪ್ರಮಾಣ, ವಿನ್ಯಾಸ, ಆಧುನಿಕತೆ ತಂತ್ರಜ್ಞಾನ ಹಾಗು ಪರಿಪೂರ್ಣತೆಯನ್ನು ಸಾಧಿಸುತ್ತಾ ಬಂದಿರುವ ದ್ವಾರಕಾ ಸಂಸ್ಥೆ ಗುಣಮಟ್ಟದಲ್ಲಿ ಐಎಸ್‌ಒ ಪ್ರಮಾಣ ಪತ್ರವನ್ನು ಪಡೆದಿದೆ. ಮನೆಗಳ ನಿರ್ಮಾಣದೊಂದಿಗೆ ತೊಡಗಿ ರಿಯಲ್ ಎಸ್ಟೇಟ್ ಉದ್ಯಮದೊಂದಿಗೆ ಮುಂದುವರಿದು 2010 ನಂತರ ಬಡಾವಣೆಯ ಉದ್ಯಮದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮಯೂರ, ಶ್ರೀರಾಮ, ಗೋಕುಲ, ಮಾನಸ, ತುಳಸಿ, ಶೇಷಾದ್ರಿ, ಗೋಮತಿ, ಶಿವೋಹಂ, ನಂದಿಲ, ಹರಿಹರ, ಜಲಧಿ ಮುಂತಾದ ಬಡಾವಣೆಗಳನ್ನು ನಿರ್ಮಿಸಿ ಅಭಿವೃದ್ದಿ ಪಡಿಸಲಾಗುತ್ತಿದೆ. 700ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಸಂಸ್ಥೆಗಿದೆ. ದ್ವಾರಕಾ ಕಾರ್ಪೋರೇಷನ್ ಪ್ರೈವೇಟ್ ಲಿ. ಮಾತೃ ಸಂಸ್ಥೆಯಾಗಿದ್ದು, ಇದರ ನೆರಳಿನಲ್ಲಿ ದ್ವಾರಕಾ ಕನ್‌ಸ್ಟ್ರಕ್ಷನ್, ದ್ವಾಕಾ ಕನ್ಸಲ್ಟೆನ್ಸಿ, ದ್ವಾರಕಾ ಹಾರ್ಡ್‌ವೇರ್, ದ್ವಾರಕಾ ಸ್ಯಾನಿಟರಿ, ದ್ವಾರಕಾ ಟೈಲ್ಸ್, ದ್ವಾರಕಾ ಸಿಮೆಂಟ್ ಪ್ರಾಡಕ್ಟ್, ದ್ವಾರಕಾ ಅರ್ತ್ ಮೂವರ‍್ಸ್, ದ್ವಾರಕಾ ಫಾರ್ಮ್ಸ್, ಸುರಭಿ ಗೋಶಾಲೆ, ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಎಂಬ ಅನೇಕ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ದ್ವಾರಕಾ ಪ್ರತಿಷ್ಠಾನದ ಮೂಲಕವಾಗಿ ವೇದ, ಕಲೆ, ಸಾಹಿತ್ಯ, ಸಂಸ್ಕೃತಿ, ಸಂವರ್ಧನದ ಕಾರ್ಯಕ್ರಮಗಳು ಸಮಾಜಮುಖಿಯಾದ ಸೇವಾ ಕಾರ್ಯಗಳು ನಡೆಯುತ್ತಿವೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಮೃತಕೃಷ್ಣ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ದ್ವಾರಕಾ ಸಂಸ್ಥೆಯ ನಿರ್ದೇಶಕಿ ಅಮೃತ ಶಾನ್‌ಬೋಗ್, ಸಂಸ್ಥೆಯ ಆಪರೇಷನ್ ಹೆಡ್ ದುರ್ಗಾಗಣೇಶ್ ಅವರು ಉಪಸ್ಥಿತರಿದ್ದರು.

ದಿನಸಿಯಿಂದ ಔಷಧಿಯ ತನಕ ಸರ್ವ ಸೌಲಭ್ಯ
ಉಪ್ಪಿನಂಗಡಿಯ ಹೋಬಳಿಯ ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 113ರಲ್ಲಿ ಕೆಮ್ಮಾರದಲ್ಲಿ 8.50ಲಕ್ಷ ಚದರ ಅಡಿಗಳ ವಿಸ್ತೀರ್ಣ (20 ಎಕ್ರೆಯಲ್ಲಿ) ಉಜ್ಜೀವನ ಬಡಾವಣೆಯಿದೆ. ಇಲ್ಲಿ ದಿನಸಿಯಿಂದ ಔಷಧಿಯ ತನಕ ಸರ್ವ ಸೌಲಭ್ಯಗಳಿವೆ. ಇಲ್ಲಿ ವಾಸವಾಗುವ ಹಿರಿಯರಿಗೆ ವಿವಿಧ ಸೌಲಭ್ಯಗಳಿವೆ. ಫಿಸಿಯೋಥೆರಪಿ, ನ್ಯಾಚುರೋಪಥಿ, ಕ್ಲಿನಿಕ್, ಮೆಡಿಕಲ್ಸ್, ರೆಸ್ಟೋರೆಂಟ್, ಸೂಪರ್ ಮರ್ಕೆಟ್, ಅತಿಥಿ ಕೊಠಡಿ, ಲೈಬ್ರೇರಿ, ಒಳಾಂಗಣ – ಹೋರಾಂಗಣ ಕ್ರೀಡಾ ಅಂಕಣಗಳು, ವಾಕಿಂಗ್ ಟ್ರ್ಯಾಕ್, ಧ್ಯಾನ ಮಂದಿರ, ಉದ್ಯಾನ, ಗೋಶಾಲೆ, ದಿನಪೂರ್ತಿ ನೀರಿನ ಸರಬರಾಜು, ತ್ಯಾಜ್ಯ ನಿರ್ವಹಣೆ, ಸ್ವಯಂ ಚಾಲಿತ ಬೀದಿ ದೀಪಗಳು, ಕಂಪೌಂಡ್ ಭದ್ರತೆ, ಕ್ಯಾಂಪಸ್ ವಾಹನ, ಕೇರ್ ಟೇಕರ್ಸ್, ಸಿಸಿ ಕ್ಯಾಮೆರಾ ಕಣ್ಗಾವಲು ಸಹಿತ ಹಲವು ಸೌಲಭ್ಯಗಳಿವೆ.
ಅರ್ತ್ಯಡ್ಕ ಗೋಪಾಲಕೃಷ್ಣ ಭಟ್ಟ
ದ್ವಾರಕಾ ಸಮೂಹ ಸಂಸ್ಥೆಗಳ ಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕರು


ಬುಕ್ಕಿಂಗ್‌ಗೆ ಶೇ.10 ರಿಯಾಯಿತಿ
ನೂತನವಾಗಿ ಲೋಕಾರ್ಪಣೆಗೊಳ್ಳುತ್ತಿರುವ ಉಜ್ಜೀವನ ಬಡಾವಣೆಯಲ್ಲಿ ಜೂ.30ರ ಒಳಗೆ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಲೋಕಾರ್ಪಣ ಕಾರ್ಯಕ್ರಮದ ನಿಮಿತ್ತವಾಗಿ ಶೇ.10 ರಿಯಾಯಿತಿ ನೀಡಲಾಗುವುದು. ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿ ಬುಕ್ಕಿಂಗ್ ಮಾಡುವವರಿಗೆ ವಿಶೇಷ ಕೊಡುಗೆ ನೀಡಲಾಗುವುದು. ಮನೆ ಸೈಟ್‌ಗಳನ್ನು ದ್ವಾರಕಾದಿಂದಲೇ ನಿರ್ಮಾಣ ಮಾಡಿಕೊಡಲಾಗುವುದು. ಜೊತೆಗೆ ಸಾಲ ಸೌಲಭ್ಯಗಳನ್ನೂ ಒದಗಿಸಲಾಗುವುದು.
ಅಮೃತಕೃಷ್ಣ ಕಾರ್ಯನಿರ್ವಾಹಕ ನಿರ್ದೇಶಕರು

LEAVE A REPLY

Please enter your comment!
Please enter your name here