ಚೆಲ್ಯಡ್ಕ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ

0

ಪುತ್ತೂರು: ಪುತ್ತೂರು-ಪಾಣಾಜೆ ರಸ್ತೆಯ ಚೆಲ್ಯಡ್ಕ ಎಂಬಲ್ಲಿ ಬೃಹತ್ ಮರವೊಂದು ಮುರಿದು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿರುವ ಘಟನೆ ಜೂ.17ರಂದು ಸಂಜೆ ನಡೆದಿದೆ.

ಬೆಟ್ಟಂಪಾಡಿ ಗ್ರಾ.ಪಂ ವ್ಯಾಪ್ತಿಯ ಚೆಲ್ಯಡ್ಕದಲ್ಲಿ ಬೃಹತ್ ಗಾತ್ರದ ಮಹಾಗನಿ ಮರವೊಂದು ಸಂಜೆ ವೇಳೆ ಬುಡದಿಂದ ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚನೆ ಉಂಟಾಗಿತ್ತು.‌

ನಿತ್ಯ ವಾಹಮ ಸಂಚಾರದಿಂದ ಕೂಡಿರುವ ರಸ್ತೆಯಲ್ಲಿ ಮರ ಬೀಳುವ ಸಮಯದಲ್ಲಿ ಯಾವುದೇ ವಾಹನಗಳ ಸಂಚಾರ, ಸಾರ್ವಜನಿಕರ ಸಂಚಾರ ಇಲ್ಲದೆ ಇದ್ದು ಸಂಭಾವ್ಯ ಅನಾಹುತ ತಪ್ಪಿದೆ.
ಮರಬಿದ್ದ ಪರಿಣಾಮ ಎಚ್.ಟಿ‌ ಲೈನ್ ಹಾದು ಹೋಗುವ ಮೂರು ಕಂಬಗಳಿಗೆ ಹಾನಿಯುಂಟಾಗಿದೆ.

ಸ್ಥಳೀಯರ ಸಹಕಾರದಿಂದ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯುತ್ ಕಂಬಗಳನ್ನು ಮರು ಸ್ಥಾಪಿಸುವ ಕಾಮಗಾರಿ ನಡೆಯುತ್ತಿದೆ.

LEAVE A REPLY

Please enter your comment!
Please enter your name here