ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿ ಮಹಾಸಭೆ, ಉಚಿತ ಪುಸ್ತಕ ವಿತರಣೆ, ಪ್ರತಿಭಾಪುರಸ್ಕಾರ

0

ನೆಲ್ಯಾಡಿ: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿ ಮತ್ತು ಮಹಿಳಾ ವೇದಿಕೆಯ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಜೂ.14ರಂದು ನೆಲ್ಯಾಡಿ ಬಿರ್ವ ಆಡಿಟೋರಿಯಂನಲ್ಲಿ ನಡೆಯಿತು.


ಆರಂಭದಲ್ಲಿ ಭಜನೆ ಮತ್ತು ಗುರುಪೂಜೆ ನಡೆಯಿತು. ಬಳಿಕ ಸಂಘದ ಅಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನೆಲ್ಯಾಡಿ ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಡಾ.ಸದಾನಂದ ಕುಂದರ್ ಉದ್ಘಾಟಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿ ಮಾತನಾಡಿ, ನಾರಾಯಣ ಗುರುಗಳ ಸಂದೇಶದಂತೆ ನಾವೆಲ್ಲರೂ ವಿದ್ಯೆಯಿಂದ ಸ್ವತಂತ್ರರಾಗೋಣ, ಸಂಘಟನೆಯಿಂದ ಬಲಯುತರಗೋಣ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಹೇಳಿ, ನೆಲ್ಯಾಡಿ ಬಿಲ್ಲವ ಸಂಘದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು.


ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್, ನೆಲ್ಯಾಡಿ ವಲಯದ ಸಂಚಾಲಕರಾದ ಅಜಿತ್ ಕುಮಾರ್ ಪಾಲೇರಿ, ತಾರಾನಾಥ ಪೋಸೊಳಿಗೆ ಶುಭ ಹಾರೈಸಿದರು. 7 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರಸಲಾಯಿತು. 108 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡಲಾಯಿತು. ಸಂಘದ ಬೆಳವಣಿಗೆ ಗರಿಷ್ಟ ಮಟ್ಟದ ದೇಣಿಗೆ ನೀಡಿದ ಸಂಘದ ಸದಸ್ಯರಾದ ಜನಾರ್ದನ ಬಾಣಜಾಲು, ತುಳಸಿಧರನ್, ತಾರಾನಾಥ ಪೋಸೊಳಿಗೆಯವರನ್ನು ಗೌರವಿಸಲಾಯಿತು. ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿತೇಶ್ ಅಂಬರ್ಜೆಯವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಧನಸಹಾಯ ನೀಡಿ ಸಹಕರಿಸಿದ ದಾನಿಗಳಿಗೆ ಶಾಲು, ಪುಷ್ಪ ನೀಡಿ ಗೌರವಿಸಲಾಯಿತು. ಪುಸ್ತಕ ವಿತರಣೆ ಪಟ್ಟಿಯನ್ನು ಮಹಿಳಾ ಘಟಕದ ಅಧ್ಯಕ್ಷೆ ದೀಕ್ಷಾ ಸಾಲಿಯಾನ್ ವಾಚಿಸಿದರು. ನೋಣಯ್ಯ ಅಂಬರ್ಜೆ ಸ್ವಾಗತಿಸಿದರು. ಲಿತಿನ್ ಕುಮಾರ್ ವಂದಿಸಿದರು. ನಿಕಟ ಪೂರ್ವ ಅಧ್ಯಕ್ಷ ಮೋಹನ್ ಕುಮಾರ್ ಡಿ. ಗಣ್ಯರ ಪರಿಚಯ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಅಂಬರ್ಜೆ ಪ್ರಾರ್ಥಿಸಿದರು. ಚಂದ್ರಶೇಖರ್ ಬಿ., ಜನಾರ್ದನ ಬಿ., ಸುಂದರ ಬಿ., ತುಳಸಿಧರನ್, ಶಿವರಾಜ್, ಮಹೇಶ್ ಬರೆಗುಡ್ಡೆ, ರಕ್ಷಣ್, ಕೌಶಿಕ್, ದೀಕ್ಷಾ ಸಾಲಿಯಾನ್, ಉಷಾ, ಅನಿತಾ ಸುರೇಶ್, ವೀರಪ್ಪ ಅಂಬರ್ಜೆ, ಶ್ರೀಧರ್ ಅಂಬರ್ಜೆ, ಪುರಂದರ ಅಂಬರ್ಜೆ, ರಕ್ಷಿತಾ ಅಂಬರ್ಜೆ ಸಹಕರಿಸಿದರು.



ಸನ್ಮಾನ;
ಬಿಲ್ಲವ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಸಂಚಾಲಕ ಅಜಿತ್ ಕುಮಾರ್ ಪಾಲೇರಿ, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್, ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿ ನಿಕಟಪೂರ್ವ ಅಧ್ಯಕ್ಷ ಮೋಹನ್ ಕುಮಾರ್ ಡಿ. ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬಿರ್ವ ಹೋಟೆಲ್ ಮಾಲಕ ಸಂತೋಷ್ ಕುಮಾರ್ ಅವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here