







ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ 2026-27ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಸಂಘದ ಪದಾಧಿಕಾರಿಗಳನ್ನು ಕ್ಯಾಬಿನೆಟ್ ಬ್ಯಾಜ್ ತೊಡಿಸುವುದರ ಮೂಲಕ ಅಭಿನಂದಿಸಿ, ಮಾತನಾಡಿ ಎಲ್ಲರೂ ಜೊತೆಯಾಗಿ ಸೇರಿಕೊಂಡು ಹೊಂದಾಣಿಕೆಯಿಂದ ಕೆಲಸ ಮಾಡುವುದು ನಾಯಕತ್ವ ಎಂದು ನುಡಿದರು. ಮುಖ್ಯ ಅತಿಥಿ ಲೇಖಕ ಡಾ. ನರೇಂದ್ರ ರೈ ದೇರ್ಲರವರು ಮಾತನಾಡಿ ಭಾವಾನಾತ್ಮಕ ಶಿಕ್ಷಣಕ್ಕೆ ಮಹತ್ವಕೊಟ್ಟರೆ ವಿದ್ಯಾರ್ಥಿಯು ಪರಿಪೂರ್ಣತೆಯತ್ತ ಹೋಗಲು ಸಾಧ್ಯ, ಶಿಕ್ಷಣವೆಂದರೆ ತನ್ನನ್ನು ತಾನು ನೋಡುವುದಲ್ಲ, ಅದರಿಂಧ ಆಚೆ ನೋಡುವುದೇ ಶಿಕ್ಷಣ. ನಾಯಕತ್ವವು ಶಾಲೆಯಲ್ಲಿ ಮುಗಿಯುವುದಿಲ್ಲ ನೀವು ಇಲ್ಲಿ ಕಲಿಯುವ ಶಿಸ್ತು ಜವಾಬ್ದಾರಿ, ಸಮಯ ಪಾಲನೆ, ಪರಿಸರದ ಪ್ರೀತಿ, ಪ್ರಾಮಾಣಿಕತೆಯಿಂದ ಗೌರವವನ್ನು ಕಾಪಾಡಿ ವಿದ್ಯಾರಶ್ಮಿಯ ಪ್ರಭೆಯನ್ನು ವಿಸ್ತರಿಸುವ ವಿದ್ಯಾರ್ಥಿಗಳಾಗಿ ಎಂದು ನುಡಿದರು. ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಅವರು ಅದ್ಯಕ್ಷತೆ ವಹಿಸಿ ಮಾತಾನಾಡಿ ವಿದ್ಯಾರ್ಥಿ ಸಂಘದ ಚುನಾವಣೆಯಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ, ನಾಯಕತ್ವ ಗುಣ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.


ಸಂಸ್ಥೆಯ ಟ್ರಸ್ಟಿಗಳಾದ ಎನ್ ಸುಂದರ್ ರೈ ಸವಣೂರು, ರಶ್ಮಿ ಅಶ್ವಿನ್ ಶೆಟ್ಟಿ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ,. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ ಉಪಸ್ಥಿತರಿದ್ದರು
ಶಿಕ್ಷಕ-ರಕ್ಷಕ ಸಂಘದ ಸದಸ್ಯರಾದ ಜೈನುದ್ದೀನ್ ತೋಟದಮೂಲೆ, ತಿಮ್ಮಪ್ಪ ಪೂಜಾರಿ ಭಾಗವಹಿಸಿದರು.



ಲಿಬಾ ಫಾತಿಮ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು 10ನೇಯ ತರಗತಿಯ ಕೆ ಎಂ. ಸುಹೈಲ್, ಸಂವಿಧಾನದ ಪೀಠಿಕೆಯನ್ನು 5ನೇ ತರಗತಿಯ ನಿರೀಕ್ಷಾ ವೈ ಆರ್ ವಾಚಿಸಿ, ತೇಜಸ್ವಿನಿ ಮತ್ತು ಬಳಗ ಪ್ರಾರ್ಥನೆಯನ್ನು ಸಲ್ಲಿಸಿದರು, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಿಶ್ಮಿತಾ ಸ್ವಾಗತಿಸಿ, ವಿದ್ಯಾರ್ಥಿಸಂಘದ ಅಧ್ಯಕ್ಷೆ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಶ್ರದ್ಧಾ ಕೆ ಡಿ ವಂದಿಸಿದರು.









