







ಆಲಂಕಾರು: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಒ.ಬಿ.ಸಿ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಸುಳ್ಯ ಬಿ.ಜೆ.ಪಿ ಕಚೇರಿಯಲ್ಲಿ ನಡೆಯಿತು.


ಸಭೆಯಲ್ಲಿ ಒ.ಬಿಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಮಹೇಶ್ ಜೋಗಿ, ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಶಶಿಧರ್ ಕಲ್ಮಂಜ, ಕಾರ್ಯದರ್ಶಿ ಚಂದ್ರಶೇಖರ್ ಪನ್ನೇ, ಉಪಾಧ್ಯಕ್ಷರಾದ ರಾಘವೇಂದ್ರ ರಾವ್, ವಿನೋದ್ ಬೆಳ್ಳಾಯರು, ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕಾರ್ಯದರ್ಶಿ ಪುಷ್ಪ ಮೇದಪ್ಪ,ಸುಳ್ಯ ಮಂಡಲದ ಕಾರ್ಯದರ್ಶಿ ಮತ್ತು ಓಬಿಸಿ ಮೋರ್ಚಾದ ಪ್ರಭಾರಿಯಾದ ಭಾರತಿ ಪುರುಷೋತ್ತಮ, ಸುಳ್ಯ ಮಂಡಲದ ಓಬಿಸಿ ಮೋರ್ಚಾದ ಅಧ್ಯಕ್ಷರಾದ ಗಿರೀಶ್ ಪೈಲಾಜೆ, ಉಪಾಧ್ಯಕ್ಷರಾದ ಚಂದ್ರಶೇಖರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಅಶೋಕ್, ಸದಾನಂದ ಆಚಾರ್ಯ ಶರವೂರು, ಚಂದ್ರಾವತಿ ಸುಣ್ಣಾಜೆ, ಅನಿತಾ ಪ್ರಕಾಶ್, ಉಮೇಶ್ ಪೂಜಾರಿ, ಸರಿತಾ, ಸರೋಜಿನಿ, ಕಷ್ಟಪ್ಪ ಪೂಜಾರಿ, ಸೇರಿದಂತೆ ಪ್ರಮುಖರು, ಸದಸ್ಯರು ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಬಿ.ಸಿ.ಎಂ ಹಾಸ್ಟೆಲ್ ಗೆ ಭೇಟಿ ನೀಡಲಾಯಿತು. ನಂತರ ಒಬಿಸಿ ಮೋರ್ಚಾದ ಕೋಶಾಧಿಕಾರಿ ಪೂರ್ಣಿಮಾ ಸೂತೋಡು ಅವರ ಪತಿ ಅಪ್ಪಯ್ಯ ಸೂತೋಡು ರವರು ಇತ್ತೀಚಿಗೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದು, ಅವರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿ ಅವರ ಮನೆಯಲ್ಲಿ ಹಣ್ಣಿನ ಗಿಡವನ್ನು ನೆಡುವುದರ ಮೂಲಕ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮವನ್ನು ನೇರವೆರಿಸಲಾಯಿತು.













