






ಪುತ್ತೂರು: ಬೆಟ್ಟಂಪಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 2026-27ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಚುನಾವಣೆ ಮೂಲಕ ನಡೆಸಲಾಯಿತು. ಶಾಲಾ ನಾಯಕನಾಗಿ ಮಹಮ್ಮದ್ ಶಹ್ವಾಝ್ ಹಾಗೂ ಉಪನಾಯಕನಾಗಿ ಧನ್ವಿತ್ ಆಯ್ಕೆಯಾದರು.


ಸ್ವಚ್ಛತಾ ಮಂತ್ರಿಯಾಗಿ ಮುಹಮ್ಮದ್ ಫೈಝಲ್, ಮುಹಮ್ಮದ್ ಮುಸ್ತಫಾ, ಆರೋಗ್ಯ ಮಂತ್ರಿಯಾಗಿ ಹಿಬಾ ಫಾತಿಮಾ, ಫಾತಿಮಾತ್ ಶೈಮಾ, ಉಸ್ತುವಾರಿ ಮಂತ್ರಿಗಳಾಗಿ ಸಾಯಿ ಯಶ್ವಿನ್, ನಿಷ್ಮಾ, ದೀಕ್ಷಾ, ಶಿಕ್ಷಣ ಮಂತ್ರಿಗಳಾಗಿ ಹಿಬಾ ಫಾತಿಮಾ, ಫಾತಿಮತ್ ಝಹ, ಅಕ್ಷರ ದಾಸೋಹ ಮಂತ್ರಿಯಾಗಿ ಮುಹಮ್ಮದ್ ಸುಹೈಲ್, ಮುಹಮ್ಮದ್ ಮುಅಝ್, ಕೃಷಿ ಮಂತ್ರಿಯಾಗಿ ಅಬೂಬಕ್ಕರ್ ಅಜಮಲ್, ಮುಹಮ್ಮದ್ ಯಾಸಿರ್ ಸಾಂಸ್ಕೃತಿಕ ಮಂತ್ರಿಯಾಗಿ ಚರಿಷ್ಮ, ಅನ್ವಿಕ, ಕ್ರೀಡಾ ಮಂತ್ರಿಯಾಗಿ ಯೂನುಸ್, ಮುಹಮ್ಮದ್ ಯಾಫಿರ್, ವಿರೋಧ ಪಕ್ಷದ ಮಂತ್ರಿಗಳಾಗಿ ಮಹಮ್ಮದ್ ಯಾಸಿರ್, ಮುಹಿನುದ್ದೀನ್ ಹಾದಿ, ಮುಹಮ್ಮದ್ ಆಫ್ರಿದ್, ಅಬ್ದುಲ್ ಶಿಹಾನ್ ಆಯ್ಕೆಗೊಂಡಿದ್ದಾರೆ. ಶಾಲಾ ಪ್ರಭಾರ ಮುಖ್ಯ ಗುರು ಮಮತಾ, ಅತಿಥಿ ಶಿಕ್ಷಕಿಯರಾದ ಮಮತಾ ಕೆ.ಎನ್, ರಮ್ಯಾ, ಗೌರವ ಶಿಕ್ಷಕಿ ಭಾರತಿರವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.













