ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ವಂಚನೆ – ಕೆಆರ್‌ಎಸ್ ಆರೋಪ

0

ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ನಿರಂತರವಾಗಿ ಮೋಸ ನಡೆಯುತ್ತಿದೆ. ಸಬ್ಸಿಡಿ ವ್ಯಾಪ್ತಿಗೆ ಬರುವ ಯೂರಿಯಾ ಹಾಗು ಡಿಎಪಿ ರಸಗೊಬ್ಬರವನ್ನು ಅವರುಗಳ ಎಮ್.ಆರ್.ಪಿ. ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಪ್ರತಿ ವರ್ಷ ಸಾವಿರಾರು ಕೋಟಿ ಹಣವನ್ನು ಮಾರಾಟಗಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ದೋಚುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲ ಅವರು ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.


ನಮ್ಮ ಪಕ್ಷ ಸ್ಥಾಪನೆಯಾದಗಿನಿಂದ ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುತ್ತಾ ಜನರ ಧ್ವನಿಯಾಗಿದೆ. ಇವತ್ತು ಹೆಚ್ಚಿನ ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಕೆ ಆಗುತ್ತಿಲ್ಲ. ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ಕೊಡದೆ ಹೆಚ್ಚಿನ ದರದಲ್ಲಿ ಡೀಲರ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಎಲ್ಲಾ ವಂಚನೆಗಳ ಕುರಿತು ನೋಂದಣಿಯಾಗಿ ರೈತರಿಗಾಗಿ ಕೆಲಸ ಮಾಡುತ್ತಿರುವ ಹಾಗು ರಸಗೊಬ್ಬರ ಮಾರಾಟ ಮಾಡುತ್ತಿರುವ ಕರ್ನಾಟಕ ರೈತ ಸಹಾಯ ರೈತ ಉತ್ಪಾದಕ ಕಂಪೆನಿಯವರ ಮೂಲಕ ಮಾಹಿತಿ ಲಭ್ಯವಾಗಿದೆ. ಈ ಅಕ್ರಮಗಳನ್ನು ತಡೆಯಲು ಕೃಷಿ ಇಲಾಖೆಯು ಕಂಟ್ರೋಲ್ ಆರ್ಡರ್ ಕ್ರಮ ಕೈಗೊಳ್ಳಬೇಕು. ಎಲ್ಲಾ ರಸಗೊಬ್ಬರ ಮಾರಾಟಗಾರರು ಎಫ್‌ಸಿಒ 1985 ಷರತ್ತುಗಳ ಪ್ರಕಾರ ರಸಗೊಬ್ಬರ ಅಂಗಡಿಗಳಲ್ಲಿ ಬೆಲೆ ಸ್ಟಾಕ್ ವಿವರ ಇತ್ಯಾದಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಕ್ರಮ ವಹಿಸಬೇಕು. ದೂರು ನೀಡಲು ಸಂಬಂದಪಟ್ಟ ತಾಲೂಕು ಸಹಾಯಕ ಕೃಷಿ ಅಧಿಕಾರಿಯ ಮೊಬೈಲ್ ಸಂಖ್ಯೆಯನ್ನು ಪ್ರದರ್ಶನ ಪಲಕದಲ್ಲಿ ನಮೂದಿಸಬೇಕು. ರಸಗೊಬ್ಬರ ಮಾರಾಟ ಕಂಪೆನಿಗಳು ಕಡ್ಡಾಯವಾಗಿ ರಸಗೊಬ್ಬರಗಳನ್ನು ಡೀಲರ್‌ಗಳಿಗೆ ನಿಯಮಗಳ ಪ್ರಕಾರ ಅಂಗಡಿಗಳ ಬಾಗಿಲಿಗೆ ಮಾಡುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ನಿಯಮಗಳನ್ನು ಮೀರುತ್ತಿರುವ ಯಾವುದೇ ದೂರು ಬಂದಾಗ ಆ ಡೀಲರ್ ಲೈಸನ್ಸ್ ರದ್ದುಪಡಿಸಬೇಕು ಎಂದು ಹೇಳಿದ ಅವರು ರಸಗೊಬ್ಬರ ಸಮಸ್ಯೆ ಎದುರಿಸುತ್ತಿರುವ ರೈತರು ಕೆ.ಆರ್.ಎಸ್ ಪಕ್ಷದ ಸಹಾಯವಾಣಿ ಸಂಖ್ಯೆ 7349577130 ಗೆ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಕೆ.ಆರ್.ಎಸ್. ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಸಜಿ, ಶಿವರಾಜ್, ನಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್ ಪೆರಾವೋ, ಶಿವ ಬೆಂಗರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here