ಪುತ್ತೂರಿನಲ್ಲಿ ಸರ್‌ಗಮ್ ಶುಭಾರಂಭ

0

ಉಪ್ಪಿನಂಗಡಿ: ಸಂಗೀತ ವಾದ್ಯಗಳ ಮಾರಾಟ ಮತ್ತು ಸೇವಾ ಮಳಿಗೆಸರ್‌ಗಮ್ ಪುತ್ತೂರಿನ ಬೊಳುವಾರಿನ ಶೆಲ್ ಪೆಟ್ರೋಲ್ ಪಂಪ್‌ನ ಎದುರು ಭಾಗದಲ್ಲಿರುವ ಗಣೇಶ್ ಪ್ರಸಾದ್ ಬಿಲ್ಡಿಂಗ್‌ನ ಒಂದನೇ ಮಹಡಿಯಲ್ಲಿ ಜೂ.18ರಂದು ಶುಭಾರಂಭಗೊಂಡಿತು.

ಪುತ್ತೂರಿನ ಪಾಂಡುರಂಗ ನಾಯಕ್ ದೀಪ ಬೆಳಗಿಸಿದರು. ಅರ್ಚಕ ರವೀಂದ್ರ ಭಟ್ ಉಪ್ಪಿನಂಗಡಿ ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು. ಈ ಸಂದರ್ಭ ಕೆ. ಶ್ರೀನಿವಾಸ ಪಡಿಯಾರ್, ಕೆ. ಜಯಶ್ರೀ ಪಡಿಯಾರ್, ಗಿರಿಧರ ನಾಯಕ್, ಕೃಷ್ಣ ಪಡಿಯಾರ್, ರಕ್ಷಿತ ಪ್ರಭು ಉಪಸ್ಥಿತರಿದ್ದರು.

ಸ್ವಾಗತಿಸಿ ಮಾತನಾಡಿದ ಸಂಸ್ಥೆಯ ಮಾಲಕ ಕೆ. ಸಾತ್ವಿಕ್ ಪಡಿಯಾರ್, ಇಲ್ಲಿ ಸಂಗೀತ ವಾದ್ಯಗಳ ಮಾರಾಟ ಮತ್ತು ಸೇವೆಗಳು ಲಭ್ಯವಿದ್ದು, ಇದರೊಂದಿಗೆ ಆಡಿಯೋ ರೆಕಾರ್ಡಿಂಗ್, ಡಬ್ಬಿಂಗ್, ಮ್ಯೂಸಿಕ್ ಪ್ರೊಡಕ್ಷನ್ ಸೌಲಭ್ಯ, ಮಿಕ್ಸಿಂಗ್ ಮಾಸ್ಟರಿಂಗ್, ಪೋಸ್ಟ್ ಪ್ರೊಡಕ್ಷನ್ ಸೇವೆಗಳು ಲಭ್ಯವಿದೆ. ಕೀ ಬೋರ್ಡ್, ಪಿಟೀಲು, ಗಿಟಾರ್, ಕೊಳಲು ಮತ್ತು ಹಿಂದೂಸ್ತಾನಿ ಗಾಯನ ತರಗತಿಯನ್ನೂ ನಡೆಸಲಾಗುತ್ತದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here