ಹಂಟ್ಯಾರು ಶಾಲಾ ಮಂತ್ರಿಮಂಡಲ

0

ಮುಖ್ಯಮಂತ್ರಿ ಹಿತೇಶ್ ಬಿ ಬಲ್ಯಾಯ, ಉಪಮುಖ್ಯಮಂತ್ರಿ ಫಾತಿಮತ್ ಅಫ್ನ

ಪುತ್ತೂರು : ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಂಟ್ಯಾರು ಇದರ 2026 -27ನೇ ಶೈಕ್ಷಣಿಕ ವರ್ಷದ ಮಂತ್ರಿ ಮಂಡಲದ ಚುನಾವಣೆಯನ್ನು ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ಮೊಬೈಲ್ ಇವಿಎಂ ಆಪ್ ಮೂಲಕ ನಡೆಸಲಾಯಿತು. ಮುಖ್ಯಮಂತ್ರಿಯಾಗಿ ಎಂಟನೇ ತರಗತಿಯ ಹಿತೇಶ್ ಬಿ ಬಲ್ಯಾಯ ಹಾಗೂ ಉಪಮುಖ್ಯಮಂತ್ರಿಯಾಗಿ ಏಳನೇ ತರಗತಿಯ ಫಾತಿಮತ್ ಅಫ್ನ ಚುನಾಯಿತರಾದರು.


ಗೃಹ ಮತ್ತು ರಕ್ಷಣಾ ಮಂತ್ರಿಗಳಾಗಿ ಸೃಜನ್, ಪ್ರೀತೇಶ್, ಮುಹಮ್ಮದ್ ಝಾಹಿದ್,ಧ್ರುವಿ, ಕೃಷಿ ಮತ್ತು ನೀರಾವರಿ ಮಂತ್ರಿಗಳಾಗಿ ಧನುಷ್, ಲಿಖಿತ್, ಪುನೀತ್, ವಿದ್ಯಾ ಮತ್ತು ವಾರ್ತಾಮಂತ್ರಿಗಳಾಗಿ ಸಾನ್ವಿ, ಹರ್ಷಿತಾ ಎ, ಜೀಷ್ಮಶ್ರೀ ಬಿ , ಮಹಮ್ಮದ್ ಅನ್ಸೀಫ್, ಸಾಂಸ್ಕೃತಿಕ ಮಂತ್ರಿಗಳಾಗಿ ಫಾತಿಮತ್ ತಂಸೀರಾ, ಆಯಿಷತ್ ನಾಝಿಯಾ, ಮಹ್ಮದ್ ಅನನ್, ಆಹಾರ ಮಂತ್ರಿಗಳಾಗಿ ಮಹಮ್ಮದ್ ಅನ್ಸೀಫ್, ಎಂ ಎಸ್ ಕೀರ್ತಿಕಾ , ಕ್ರೀಡಾ ಮತ್ತು ಶಿಸ್ತು ಮಂತ್ರಿಗಳಾಗಿ, ಖದೀಜತ್ ಅಫ್ರ, ಸೃಷ್ಟಿ ವೆಂಕಟೇಶ್ ಬೀರಕಬ್ಬಿ ಆರೋಗ್ಯ ಮತ್ತು ಶುಚಿತ್ವ ಮಂತ್ರಿಗಳಾಗಿ ದಿವಿನ್ ಎನ್ ರೈ, ಪ್ರಾಣೇಶ್ ಡಿಸೋಜ, ಆಹಾರ ಮಂತ್ರಿಗಳಾಗಿ ಮಹಮ್ಮದ್ ಶುಜಾಹ್ , ಆಯಿಷತ್ ನಾಝಿಯಾ ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ ಕೆ ಇವರು ಚುನಾವಣಾ ಅಧಿಕಾರಿಯಾಗಿ, ಶಿಕ್ಷಕಿ ವತ್ಸಲಾ ಬಿ , ಶಾಲಾ ಅತಿಥಿ ಶಿಕ್ಷಕಿಯರಾದ ಅಕ್ಷತಾ ಎ ಆರ್ ,ಪ್ರಮೀಳ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here