






ನಾಯಕಿ: ಫಾತಿಮತ್ ಸನ, ಕಾರ್ಯದರ್ಶಿ: ಮನಸ್ವಿ ಎಂ.ಜೆ
ಪುತ್ತೂರು: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ದಿನಾಂಕ 20-06-2026ರಂದು ಯಶಸ್ವಿಯಾಗಿ ನಡೆಯಿತು.


ಚುನಾವಣೆಯ ಫಲಿತಾಂಶದಂತೆ, ವಿದ್ಯಾರ್ಥಿ ನಾಯಕಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಫಾತಿಮತ್ ಸನ ಮತ್ತು ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಮನಸ್ವಿ ಯಂ ಜೆ ಅವರು ಆಯ್ಕೆಯಾಗಿದ್ದಾರೆ. ಈ ಬಾರಿಯ ಚುನಾವಣಾ ಪ್ರಕ್ರಿಯೆಯು ವಿಶೇಷವಾಗಿತ್ತು. ಮತದಾನವನ್ನು ಮೊಬೈಲ್ ಆಪ್ ಮೂಲಕ ಡಿಜಿಟಲ್ ರೂಪದಲ್ಲಿ ನಡೆಸಲಾಯಿತು. ಈ ಸಂಪೂರ್ಣ ಪ್ರಕ್ರಿಯೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರಮೀಳ ಜೆಸ್ಸಿ ಕ್ರಾಸ್ತಾ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕಿ ಚಿತ್ರಲೇಖಾ ಅವರ ನೇತೃತ್ವದಲ್ಲಿ ಎಲ್ಲಾ ಉಪನ್ಯಾಸಕರ ಸಹಕಾರದೊಂದಿಗೆ ಸುಗಮವಾಗಿ ನಡೆಸಲಾಯಿತು. ಈ ಚುನಾವಣಾ ಕಣದಲ್ಲಿ ಫಾತಿಮತ್ ಸನ, ಪ್ರನ್ಯಾ, ತನುಷಾ ಮತ್ತು ಮನಸ್ವಿ ಯಂ ಜೆ ಅವರು ಸ್ಪರ್ಧಿಸಿದ್ದರು.













