






ಪುಣಚ: ಉದಯ್ ಪೂಜಾರಿ ಸಾರಥ್ಯದ ಬಿರುವೆರ್ ಕುಡ್ಲ ಪುತ್ತೂರು ಘಟಕದ ವತಿಯಿಂದ ಶಾಲಾ ಮಕ್ಕಳ ಯೋಗ ಸಮವಸ್ತ್ರ ವಿತರಣಾ ಕಾರ್ಯಕ್ರಮ ಜೂ.20ರಂದು ಪುಣಚ ತೋರಣಕಟ್ಟೆ ದ.ಕ.ಜಿ.ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಬಿರುವೆರ್ ಕುಡ್ಲ ಪುತ್ತೂರು ಘಟಕದ ಅಧ್ಯಕ್ಷ ಜನಾರ್ಧನ ಪೂಜಾರಿ ಪಡುಮಲೆ ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಿಸಿದರು. ಉಪಾಧ್ಯಕ್ಷ ಮನೋಹರ್ ರೈ ಮೇಲ್ಮಜಲು, ಗೌರವಾಧ್ಯಕ್ಷ ಜಗದೀಶ್ ಅಮೀನ್ ನಡುಬೈಲು, ಕಾರ್ಯದರ್ಶಿ ಪ್ರವೀಣ್ ಸಣ್ಣಗುತ್ತು, ಕೋಶಾಧಿಕಾರಿ ಶರತ್ ಕುಮಾರ್ ಬಡಾವು, ಸಂಚಾಲಕ ಧನಂಜಯ ಪಟ್ಲ ಕಲ್ಲೆಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿರುವೆರ್ ಕುಡ್ಲ ಘಟಕದ ಪದಾಧಿಕಾರಿಗಳು, ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದರು.













